Advertisement

ಜಿಲ್ಲಾಡಳಿತದಿಂದ 1.83 ಲಕ್ಷ ಜನರ ಸ್ಕ್ರೀನಿಂಗ್‌: ಒಟ್ಟು 1268 ಜನರ ಗಂಟಲುದ್ರವ ಸಂಗ್ರಹ

02:44 PM May 14, 2020 | mahesh |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನ್ಯ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾವಹಿಸಿದ್ದು, ಜಿಲ್ಲೆಯಲ್ಲಿ ಬುಧವಾರದ ಅಂತ್ಯಕ್ಕೆ 1,83,378 ಜನರ ಸ್ಕ್ರೀನಿಂಗ್‌ ಮಾಡಲಾಗಿದೆ. ಒಟ್ಟಾರೆ 1,268 ಜನರ ಗಂಟಲು ದ್ರವ ಪಡೆದು ಲ್ಯಾಬ್‌ಗ ಕಳಿಸಿದ್ದು, 1,185 ಜನರ ವರದಿ ನೆಗಟಿವ್‌ ಬಂದಿದೆ. ಉಳಿದವರ ವರದಿ ಬಾಕಿಯಿದೆ.

Advertisement

ಜಿಲ್ಲಾಡಳಿತವು ಕೋವಿಡ್ ನಿಯಂತ್ರಣಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿದೆ. ಈ ನಿರ್ಧಾರದಿಂದಲೇ ಜಿಲ್ಲೆಯು ಇನ್ನೂ ಗ್ರೀನ್‌ ಝೋನ್‌ನಲ್ಲಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಜನರ ಮೇಲೆ ಅತಿ ಹೆಚ್ಚು ಕಾಳಜಿ ವಹಿಸಿದ್ದಲ್ಲದೇ, ಅವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಡುವ ವ್ಯವಸ್ಥೆಯನ್ನೂ ಮಾಡುತ್ತಿದೆ.
ಜಿಲ್ಲೆಯಲ್ಲಿ ಲಾಕ್‌ಡೌನ್‌ ಆರಂಭಿಕ ದಿನದಿಂದ ಈ ವರೆಗೂ 1,83 ಲಕ್ಷ ಜನರನ್ನು ಸ್ಕ್ರೀನಿಂಗ್‌ ಮಾಡಿದೆ. ಇನ್ನೂ ರೈಲ್ವೇ ನಿಲ್ದಾಣದಲ್ಲಿ 880 ಜನ, ಬಸ್‌ ನಿಲ್ದಾಣದಲ್ಲಿ 1,167 ಜನ, ಚೆಕ್‌ಪೋಸ್ಟ್‌ನಲ್ಲಿ 81,510 ಜನ, ಇತರೆ 53,069 ಜನ, ಕಾರ್ಮಿಕರ ಕ್ವಾರೆಂಟೈನ್‌ 46,752 ಜನರನ್ನು ಸ್ಕ್ರೀನಿಂಗ್‌ ಮಾಡಿದೆ.

1,185 ಜನರ ವರದಿ ನೆಗೆಟಿವ್‌: ಇನ್ನೂ ಹೈ ರಿಸ್ಕ್ ಏರಿಯಾದಲ್ಲಿ ಪ್ರವಾಸ ಮಾಡಿದ, ಗುಳೆ ಹೋಗಿ ವಾಪಸ್ಸಾಗಿರುವ ಜಿಲ್ಲೆಯ ಜನರ ಮೇಲೆ ನಿಗಾ ಇರಿಸಿದ್ದು, ಕೆಲವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಿದೆ. ಕೋವಿಡ್ ಸೋಂಕಿರುವವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರ ಮೇಲೂ ನಿಗಾ ಇರಿಸಿದ್ದು, ಬುಧವಾರಕ್ಕೆ ಒಟ್ಟಾರೆ 1,268 ಜನರ ಗಂಟಲು ದ್ರವ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದು, ಈ ವರೆಗೂ 1185 ಜನ ವರದಿ ನೆಗೆಟಿವ್‌ ಎಂದು ಬಂದಿದೆ. ಇನ್ನೂ 83 ಜನರ ವರದಿ ಬರುವುದು ಬಾಕಿಯಿದೆ.

ಕಂಪ್ಲಿ ಪಾಸಿಟಿವ್‌ ಎಲ್ಲರಿಗೂ ಟೆನ್ಶನ್‌: ಜಿಲ್ಲೆಯಲ್ಲಿ ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ ವ್ಯಕ್ತಿಯೋರ್ವನಿಗೆ ಕಂಪ್ಲಿಯಲ್ಲಿ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ಇದು ಜಿಲ್ಲೆಯ ಜನರ ಕಳವಳಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಬಸ್‌ನಲ್ಲಿ ಪ್ರಯಾಣ ಮಾಡಿದ ಎಲ್ಲ ಜನರು, ಬಸ್‌ ಚಾಲಕ, ಗಂಗಾವತಿ ಬಸ್‌ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ಮಾಡಿದ ನರ್ಸ್‌ಗಳು ಹಾಗೂ ಸೋಂಕಿತ ವ್ಯಕ್ತಿಯನ್ನು ಕಂಪ್ಲಿಗೆ ಬಿಟ್ಟು ಬಂದಿರುವ ಆಟೋ ಚಾಲಕನನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next