Advertisement

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

09:45 AM Oct 18, 2021 | Team Udayavani |

ಮಸ್ಕತ್: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ತಂಡ ಕನಸಿನ ಆರಂಭ ಪಡೆದಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆರು ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

Advertisement

ಒಮಾನ್ ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ 140 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಬಾಂಗ್ಲಾ 134 ರನ್ ಗಳನ್ನಷ್ಟೇ ಗಳಿಸಿತು.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸ್ಕಾಟ್ಲೆಂಡ್ ಗೆ ಮುನ್ಸೆ 29 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. 45 ರನ್ ಗೆ ಎರಡನೇ ವಿಕೆಟ್ ಕಳೆದುಕೊಂಡ ಸ್ಕಾಟ್ಲೆಂಡ್ ಬಳಿಕ 53 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಏಳನೇ ವಿಕೆಟ್ ಗೆ ಜೊತೆಯಾದ ಕ್ರಿಸ್ ಗ್ರೀವ್ಸ್ ಮತ್ತು ಮಾರ್ಕ್ ವ್ಯಾಟ್ ಅರ್ಧಶತಕದ ಜೊತೆಯಾಟವಾಡಿದರು. 28 ಎಸೆತ ಎದುರಿಸಿದ ಗ್ರೀವ್ಸ್ 45 ರನ್ ಗಳಿಸಿದರು. ಬಾಂಗ್ಲಾ ಪರ ಮೆಹದಿ ಹಸನ್ ಮೂರು ವಿಕೆಟ್ ಕಿತ್ತರೆ, ಶಕೀಬ್ ಮತ್ತು ಮುಸ್ತಫಿಜುರ್ ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ:ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

Advertisement

141 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಬ್ಯಾಟ್ಸಮನ್ ಗಳಿಗೆ ಸ್ಕಾಟ್ಲೆಂಡ್ ಬೌಲರ್ ಗಳು ಶಿಸ್ತುಬದ್ಧ ದಾಳಿಯಿಂದ ಕಟ್ಟಿ ಹಾಕಿದರು. 18 ರನ್ ಗೆ ಎರಡು ವಿಕೆಟ್ ಕಳೆದುಕೊಂಡ ಬಾಂಗ್ಲಾಕ್ಕೆ ಅನುಭವಿಗಳಾದ ಶಕೀಬ್ ಮತ್ತು ರಹೀಂ ನೆರವಾದರು. ರಹೀಂ 38 ರನ್ ಮತ್ತು ಶಕೀಬ್ 20 ರನ್ ಗಳಿಸಿದರು. ನಾಯಕ ಮೊಹಮದುಲ್ಲಾ 23 ಮತ್ತು ಕೊನೆಯಲ್ಲಿ ಮೆಹದಿ ಹಸನ್ ಐದು ಎಸೆತಗಳಲ್ಲಿ 13 ರನ್ ಗಳಿಸಿದರು. 20 ಓವರ್ ಗಳಲ್ಲಿ 134 ರನ್ ಗಳಿಸಿದ ಬಾಂಗ್ಲಾ ಆರು ರನ್ ಅಂತರದ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next