Advertisement
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರ ನಿವಾಸಿ ಉಮ್ಮರ್ (50) ಮೃತಪಟ್ಟ ವ್ಯಕ್ತಿ. ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಉಮ್ಮರ್ ಅವರು ತನ್ನ ಸ್ಕೂಟಿಯಲ್ಲಿ ಕಡಬ ಕಡೆಯಿಂದ ಬಂದು ಕಳಾರ ಬಳಿಕ ತನ್ನ ಮನೆಯತ್ತ ತಿರುಗಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಸ್ಕಾರ್ಪಿಯೋ ಢಿಕ್ಕಿ ಹೊಡೆದಿದೆ. ಈ ಸಂದರ್ಭ ತಲೆಗೆ ಗಂಭೀರ ಗಾಯವಾದ ಪರಿಣಾಮ ಉಮ್ಮರ್ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಉಮ್ಮರ್ ಅವರ ಪತ್ನಿಯ ಕಣ್ಣೆದುರೇ ಅಪಘಾತ ನಡೆದಿತ್ತು. ಅವರ ಮನೆ ರಸ್ತೆ ಪಕ್ಕದಲ್ಲೇ ಇರುವುದರಿಂದ ಉಮ್ಮರ್ ಅವರ ಪತ್ನಿ, ಪತಿಯ ಬರುವಿಕೆಯನ್ನು ನೋಡುತ್ತಲೇ ಇದ್ದರು. ಅವರು ನೋಡನೋಡುತ್ತಿದ್ದಂತೆ ಸ್ಕಾರ್ಪಿಯೋ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ತತ್‌ಕ್ಷಣ ಅವರ ಮಗ ಆಟೋ ರಿûಾವೊಂದರಲ್ಲಿ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಅದಾಗಲೆ ಪ್ರಾಣ ಹೋಗಿತ್ತು. ಮೃತರು ಸ್ಥಳೀಯವಾಗಿ ಟಿಂಬರ್ ವ್ಯವಹಾರ ನಡೆಸುತ್ತಿದ್ದರು.