Advertisement

SCO; ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ಲಾಮಾಬಾದ್‌ ಗೆ ಆಹ್ವಾನಿಸಿದ ಪಾಕಿಸ್ತಾನ

11:30 AM Aug 30, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪಾಕಿಸ್ತಾನವು ಇಸ್ಲಮಾಬಾದ್‌ (Islamabad) ನಲ್ಲಿ ನಡೆಯಲಿರುವ ಶಾಂಘೈ ಕೋಆಪರೇಶನ್ ಆರ್ಗನೈಸೇಶನ್‌ (SCO) ಸಭೆಗೆ ಅಧಿಕೃತವಾಗಿ ಆಹ್ವಾನಿಸಿದೆ. ಈ ಸಭೆ ಅಕ್ಟೋಬರ್‌ ನಲ್ಲಿ ನಡೆಯಲಿದೆ ಎಂದು ವರದಿ ಹೇಳಿದೆ.

Advertisement

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾಪ್ತಾಹಿಕ ಸುದ್ದಿಗೋಷ್ಟಿಯಲ್ಲಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಅವರು, ಮುಂಬರುವ ಇಸ್ಲಾಮಾಬಾದ್‌ ನ ಸರ್ಕಾರದ ಮುಖ್ಯಸ್ಥರ ಮಂಡಳಿ ಸಭೆಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಎಲ್ಲಾ ಮುಖ್ಯಸ್ಥರನ್ನು ಪಾಕಿಸ್ತಾನ ಆಹ್ವಾನಿಸಿದೆ ಎಂದು ಹೇಳಿದರು.

ಅಕ್ಟೋಬರ್ 15-16 ರಂದು ಪಾಕಿಸ್ತಾನವು ಆಯೋಜಿಸುವ ಎಸ್‌ ಸಿಓ ಸಭೆಗೆ ಇಸ್ಲಾಮಾಬಾದ್ ಈಗಾಗಲೇ ಕೆಲವು ದೃಢೀಕರಣಗಳನ್ನು ಸ್ವೀಕರಿಸಿದೆ ಎಂದು ಬಲೂಚ್ ಹೇಳಿದರು.

ಪ್ರಾದೇಶಿಕ ಶೃಂಗಸಭೆಗೆ ಭಾರತದ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ ಎರಡು ದಿನಗಳ ನಂತರ ಎಸ್‌ ಸಿಒ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರಿಗೆ ಪಾಕಿಸ್ತಾನದ ಆಹ್ವಾನದ ಅಧಿಕೃತ ದೃಢೀಕರಣ ಬಂದಿದೆ.

ಈತನ್ಮಧ್ಯೆ, ಪಾಕಿಸ್ತಾನದಲ್ಲಿ ಮುಂಬರುವ SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದಿಲ್ಲ ಎಂದು ಸೂಚಿಸುವ ಮಾಧ್ಯಮ ವರದಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಹಿಂದೆ ನಿರಾಕರಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next