Advertisement

ಸಿಂಧಿಯಾ ಅವರು ಯಾವುದೇ ಸಮಯದಲ್ಲಾದರೂ ನನ್ನ ಮನೆಗೆ ಬರುವ ಅವಕಾಶವಿತ್ತು: ರಾಹುಲ್ ಗಾಂಧಿ

10:27 AM Mar 13, 2020 | Mithun PG |

ನವದೆಹಲಿ: ಜ್ಯೋತಿರಾಧಿತ್ಯ ಸಿಂಧಿಯಾ ಅವರು ಯಾವ ಸಮಯದಲ್ಲಾದರೂ ನನ್ನನ್ನು ಭೇಟಿಯಾಗಲು ಅವಕಾಶವಿರುವ ಏಕೈಕ ಕಾಂಗ್ರೆಸ್ ನಾಯಕರಾಗಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Advertisement

ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜ್ಯೋತಿರಾಧಿತ್ಯ ಸಿಂಧಿಯಾ ಹಲವು ಭಾರೀ ಪ್ರಯತ್ನಿಸಿದರೂ ಅನುಮತಿ ನಿರಕಾರಿಸಲಾಗಿತ್ತು ಎಂಬ ವರದಿಗಳ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರಿಗೆ ಯಾವುದೇ ಸಮಯದಲ್ಲೂ ನನ್ನ ಮನೆಗೆ ಬರುವ ಎಲ್ಲಾ ಅವಕಾಶಗಳಿದ್ದವು. ಆದರೇ ಅದು ಈಗ ಮುಗಿದ ಅಧ್ಯಾಯವಾಗಿದೆ ಎಂದಿದ್ದಾರೆ.

ಮಾತ್ರವಲ್ಲದೆ ಒಂದು ವರ್ಷದ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಪದವಿಗಾಗಿ ಕಮಲ್ ನಾಥ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ನಡೆಸಿದ  ಶಾಂತಿ ಮಾತುಕತೆಯ ಟ್ವೀಟ್ ಗಳನ್ನು ಟೀಟ್ವೀಟ್ ಮಾಡಿದ್ದಾರೆ.

ಅದರಲ್ಲಿ  ‘ಇಬ್ಬರು ಶಕ್ತಿಶಾಲಿ ಯೋಧರರೆಂದರೇ ತಾಳ್ಮೆ ಮತ್ತು ಸಮಯ ಎಂಬ ‘ ಮಾತನ್ನು ಉಲ್ಲೇಖ ಮಾಡಿದ್ದರು.

Advertisement

ಈಗಾಗಲೇ ಕಾಂಗ್ರೆಸ್ ತೊರೆದಿರುವ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜತೆಗೆ ಮಾ.22 ರಂದು ಮಧ್ಯಪ್ರದೇಶದಿಂದ ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿಯೂ ಆಯ್ಕೆಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next