Advertisement

ಹಿಮಾಲಯದಲ್ಲಿ 8.5ರಷ್ಟು ತೀವ್ರತೆಯ ಭೂಕಂಪ ಸಂಭವ;ಬೆಚ್ಚಿ ಬೀಳಿಸೋ ವಿವರ

12:39 PM Dec 01, 2018 | Sharanya Alva |

ಬೆಂಗಳೂರು: ಹಿಮಾಲಯದಲ್ಲಿ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಈಗಾಗಲೇ ಹಲವು ಸಂಶೋಧನಾ ವರದಿ ಎಚ್ಚರಿಕೆ ನೀಡಿದ್ದು, ಇದೀಗ ಭಾರತೀಯ ಸಂಶೋಧಕರು ಕೂಡಾ ಹಿಮಾಲಯದಲ್ಲಿ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಕುರಿತು ಅಧ್ಯಯನ ನಡೆಸಿದ್ದಾರೆ.

Advertisement

ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ನ ಭೂಕಂಪ ಅಧ್ಯಯನ ವಿಜ್ಞಾನಿ ಸಿಪಿ ರಾಜೇಂದ್ರನ್ ಅವರ ನೂತನ ಅಧ್ಯಯನದ ಪ್ರಕಾರ, ಮಧ್ಯ ಹಿಮಾಲಯ ಭಾಗದಲ್ಲಿ ಭವಿಷ್ಯದಲ್ಲಿ ಯಾವ ಸಂದರ್ಭದಲ್ಲಿಯೂ ಕನಿಷ್ಠ ಒಂದಾದರು ಬೃಹತ್ ಪ್ರಮಾಣದ (8.5ರಷ್ಟು ತೀವ್ರತೆ) ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.

ಜಿಯೋಲಾಜಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಸಂಶೋಧಕರು ನೂತನವಾಗಿ ಸಂಶೋಧಿಸಿದ ಎರಡು ಸ್ಥಳಗಳಾದ ಪಶ್ಚಿಮ ನೇಪಾಳದ ಮೋಹನಾ ಖೋಲಾ ಮತ್ತು ಭಾರತದ ಗಡಿರೇಖೆಯಲ್ಲಿರುವ ಛೋರ್ಗಾಲಿಯಾ ದತ್ತಾಂಶಗಳನ್ನು ಈಗಿರುವ ದತ್ತಾಂಶದ ಜೊತೆಗೆ ಹೋಲಿಕೆ ಮಾಡಿ ವಿಮರ್ಶಿಸಿದ್ದಾರೆ ಎಂದು ವರದಿ ಹೇಳಿದೆ.

ಅಷ್ಟೇ ಅಲ್ಲ ಸಂಶೋಧಕರು ಸ್ಥಳೀಯ ಭೂವಿಜ್ಞಾನ ಮತ್ತು ಭಾರತೀಯ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಟಿಸಿರುವ ವಿಶೇಷ ಭೂಪಟದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಗೂಗಲ್ ಅರ್ಥ್ ಮತ್ತು ಇಸ್ರೋದ ಕಾರ್ಟೊಸ್ಯಾಟ್ 1 ಸೆಟಲೈಟ್ನ ಚಿತ್ರವನ್ನು ಅಧ್ಯಯನಕ್ಕೆ ಬಳಸಿಕೊಂಡಿದೆ.

Advertisement

ಸಂಶೋಧಕರ ಪ್ರಕಾರ, ಮಧ್ಯ ಹಿಮಾಲಯದಲ್ಲಿ 1315 ಮತ್ತು 1440ರ ನಡುವೆ 8.5ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಅಧ್ಯಯನದ ಪ್ರಕಾರ,  ಭಾರೀ ಭೂಕಂಪ ಸಂಭವಿಸಿ ಇದೀಗ 600, 700 ವರ್ಷಗಳೇ ಕಳೆದಿದೆ. ಹೀಗಾಗಿ ಮಧ್ಯ ಹಿಮಾಲಯದಲ್ಲಿ ಭೂಕಂಪ ಹಾಗೆಯೇ ಉಳಿದುಕೊಂಡಿದೆ.

ಈ ಭಾಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರದಲ್ಲಿ ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣವಾಗುತ್ತಿದ್ದು, ಮಧ್ಯ ಹಿಮಾಲಯ ಭಾಗದಲ್ಲಿ ತೀವ್ರ ತರದ ಭೂಕಂಪ ಸಂಭವಿಸಿದರೆ ಅದರ ಅಪಾಯ ದೊಡ್ಡ ಮಟ್ಟದ್ದಾಗಿರುತ್ತದೆ. ನಾವು ಅದನ್ನು ಎದುರಿಸಲು ಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆಯೂ ಹೆಚ್ಚು ಮುತುವರ್ಜಿ ವಹಿಸಿಲ್ಲ ಎಂದು ರಾಜೇಂದ್ರನ್ ಅವರು ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next