Advertisement

ಸೂರ್ಯನಿಗಿಂತ 70 ಪಟ್ಟು ದೈತ್ಯ ಕಪ್ಪುರಂಧ್ರ ಪತ್ತೆ

12:29 AM Nov 29, 2019 | mahesh |

ಬೀಜಿಂಗ್‌: ಸೂರ್ಯನಿಗಿಂತ ಬರೋಬ್ಬರಿ 70 ಪಟ್ಟು ದೈತ್ಯವಾದ ಯಾರೂ ಊಹಿಸಿರದಂಥ ಕಪ್ಪು ರಂಧ್ರವೊಂದು ಕ್ಷೀರಪಥದ ತಾರಾಗಣದಲ್ಲಿ ಪತ್ತೆಯಾಗಿದೆ. ನಕ್ಷತ್ರಗಳ ವಿಕಸನದ ಕುರಿತು ಸದ್ಯಕ್ಕಿರುವ ಮಾದರಿಗಳಿಗೇ ಇದು ಸವಾಲೆಸೆಯುವಂತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಕ್ಷೀರಪಥದಲ್ಲಿ ಸುಮಾರು 100 ದಶಲಕ್ಷ ಕಪ್ಪು ರಂಧ್ರಗಳಿವೆ (ಬೃಹತ್‌ ನಕ್ಷತ್ರಗಳ ಪತನದಿಂದ ಸೃಷ್ಟಿಯಾಗು ವಂಥದ್ದು). ಈವರೆಗೆ ಕಂಡುಕೊಂಡಂತೆ ನಮ್ಮ ತಾರಾಪುಂಜ ದಲ್ಲಿರುವ ಒಂದು ಕಪ್ಪುರಂಧ್ರದ ದ್ರವ್ಯರಾಶಿಯು ಸೂರ್ಯನಿಗಿಂತ ಗರಿಷ್ಠ 20 ಪಟ್ಟು ಬೃಹತ್‌ ಆಗಿದೆಯೇ ಹೊರತು, ಅದಕ್ಕಿಂತ ದೈತ್ಯ ವಾದದ್ದು ಎಂದೂ ಪತ್ತೆಯಾಗಿರಲಿಲ್ಲ. ಆದರೆ, ಈಗ ಚೈನೀಸ್‌ ಅಕಾಡೆಮಿ ಆಫ್ ಸೈನ್ಸಸ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯದ ವಿಜ್ಞಾನಿಗಳ ನೇತೃತ್ವದ ಅಂತಾರಾಷ್ಟ್ರೀಯ ತಂಡವು ಎಲ್ಲ ಊಹೆ ಗಳನ್ನೂ ಸುಳ್ಳಾಗಿಸಿ ಈ ದೈತ್ಯ ಕಪ್ಪುರಂಧ್ರವನ್ನು ಪತ್ತೆ ಮಾಡಿದೆ. ಇದಕ್ಕೆ ಎಲ್‌ಬಿ-1 ಎಂದು ಹೆಸರಿಡಲಾಗಿದ್ದು, ಇದು ಭೂಮಿಯಿಂದ 15 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರ ದಲ್ಲಿದೆ. ಅಲ್ಲದೆ ಸೂರ್ಯನಿಗಿಂತ 70 ಪಟ್ಟು ದೈತ್ಯಾಕಾರದ್ದಾಗಿದೆ. ಇಂಥದ್ದೊಂದು ಅಭೂತಪೂರ್ವ ಕಪ್ಪುರಂಧ್ರ ಜನ್ಮತಾಳಿದ್ದಾದರೂ ಹೇಗೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದಿದ್ದಾರೆ ಪ್ರೊಫೆಸರ್‌ ಲಿಯು ಜಿಫೆಂಗ್‌.

Advertisement

Udayavani is now on Telegram. Click here to join our channel and stay updated with the latest news.

Next