Advertisement

ಮೇ ಆರಂಭದಲ್ಲಿ ಕೋವಿಡ್ ಮತ್ತೆ ಉಲ್ಬಣ : ಐಐಟಿ ಕಾನ್ಪುರ್ ಪ್ರೊ. ಮನಿಂದರ್ ಅಗರ್ ವಾಲ್

11:11 AM Apr 20, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕಿನ ರೂಪಾಂತರಿ ಅಲೆ ದೇಶದಲ್ಲಿ ಎಲ್ಲವೂ ಸಮಸ್ಥಿತಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ಹಠಾತ್ ಏರಿಕೆಯಾಗಿ ತಲ್ಲಣಗೊಳಿಸಿದೆ. ಸರ್ಕಾರರಗೂ ನಿರಂತರ ಪ್ರಯತ್ನ ಮಾಡಿದರೂ ಸೋಂಕಜಿನ ಪ್ರಮಾನ ಕಡಿಮೆಯಾಗುತ್ತಿಲ್ಲ. ಇತ್ತ ದೇಶದಾದ್ಯಂತ ಮತ್ತೆ ಲಾಕ್ ಡೌನ್ ಭೀತಿ ಎದುರಾಗಿದೆ.

Advertisement

ಏತನ್ಮಧ್ಯೆ, ಮೇ ತಿಂಗಳಿನಲ್ಲಿ ದೇಶದಲದಲಿ ಕೋವಿಡ್ ಸೋಂಕು ಮತ್ತೆ ಉಲ್ಬಣವಾಗಲಿದೆ ಎಂದು ಐಐಟಿ ಕಾನ್ಪುರ್ ನ ಪ್ರಾಧ್ಯಾಪಕ ಪದ್ಮಶ್ರೀ ಪುರಸ್ಕೃತ ಮನಿಂದರ್ ಅಗರ್ ವಾಲ್ ಭವಿಷ್ಯ ನುಡಿದಿದ್ದಾರೆ.

ಓದಿ : ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ದೈನಿಕ್ ಭಾಸ್ಕರ್  ಹಿಂದಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಮ್ಮ ತಂಡ ಕಳೆದೊಂದು ವಾರದಿಂದ ದೇಶದ ಕೋವಿಡ್ ಪರಿಸ್ಥಿತಿಯನ್ನು, ಕೋವಿಡ್ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಏಪ್ರಿಲ್ ತಿಂಗಳಾಂತ್ಯದಲ್ಲಿ, ಮೇ ಮೊದಲ ವಾರದಲ್ಲಿ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ, ತದನಂತರದ ಹದಿನೈದು ಇಪ್ಪತ್ತು ದಿನಗಳ ಅವಧಿಯಲ್ಲಿ ಕುಸಿತವಾಗಬಹುದು ಎಂದು ಅವರು ಹೇಳಿದ್ದಾರೆ.

ಸೋಂಕಿನ ಪ್ರಮಾಣ ದಿನ ನಿತ್ಯ ದಿಢೀರನೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಹೊಸ ಸೋಂಕಿನ ಸಂಖ್ಯೆಯ ಬಗ್ಗೆ ಊಹಿಸಲು ಸಾಧ್ಯವಿಲ್ಲ. ಅವುಗಳ ಬಗ್ಗೆ ಅನಿಶ್ಚಿತತೆ ಇದೆ. ದಿನಕ್ಕೆ ಒಂದು ಲಕ್ಷ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಇದು ಏರಿಕೆ ಇಳಿಕೆ ಗಳು ಕಂಡು ಬರಬಹುದು ಎಂದಿದ್ದಾರೆ.

Advertisement

ಇನ್ನು, ಎಡಪಂಥೀಯ ಧೋರಣೆಯ ಮಾಧ್ಯಮಗಳು ಕುಂಭಮೇಳ ಹಾಗೂ ಚುನಾವಣಾ ಪ್ರಚಾರ ಸಭೆಗಳಿಂದ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಆರೋಪಿಸುತ್ತಿರುವುದನ್ನು ತಳ್ಳಿ ಹಾಕಿದ ಅಗರ್ ವಾಲ್, ಕುಂಭ ಮೇಳ ಹಾಗೂ ಚುನಾವಣಾ ಪ್ರಚಾರ ಸಭೆಯಿಂದ ಕೋವಿಡ್ ಸೋಂಕು ಹೆಚ್ಚಳವಾಗಬಹುದು ಆದರೇ, ಇದು ಎರಡನೇ ಅಲೆಗೆ ಕಾರಣವಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕೋವಿಡ್ ಸೋಂಕಿನ ಎರಡನೇ ಅಲೆಯ ಉಲ್ಬಣದ ತೀವ್ರತೆಯ ಕಾರಣದ ಬಗ್ಗೆ ಮಾತನಾಡಿದ ಅವರು, ಫೇಬ್ರವರಿಯಲ್ಲಿ ಶಾಲಾ ಕಾಲೇಜುಗಳನ್ನು ಬಹುತೇಕ ದೇಶದ ಎಲ್ಲಾ ರಾಜ್ಯಗಳಲ್ಲಿ ತೆರೆಯಲಾಯಿತು ಹಾಗೂ ಜನರ ಓಡಾಟಕ್ಕೆ ಸಂಪೂರ್ಣವಾಗಿ ಮುಕ್ತ ಅವಕಾಶ ಒದಗಿಸಿದ್ದು ಮುಖ್ಯ ಕಾರಣವಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಓದಿ : 2020-21ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಶೇ. 22.58 ಏರಿಕೆ..!

Advertisement

Udayavani is now on Telegram. Click here to join our channel and stay updated with the latest news.

Next