Advertisement
ಭವಿಷ್ಯದಲ್ಲಿ ನಿರ್ದಿಷ್ಟ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಈ ದುಂಬಿಗಳನ್ನು ಶಿಫಾರಸು ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಾಗಸ್ಪರ್ಶಿ ಕೀಟಗಳ ಸ್ವಾಭಾವಿಕ ವಾಸಸ್ಥಳಗಳನ್ನು ಕೃತಕವಾಗಿ ನಿರ್ಮಿಸಿ, ಸ್ಥಳೀಯ ದುಂಬಿಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಸದ್ಯಮೂರುಪ್ರಕಾರದ ಜೇನುನೊಣ ಗಳಲ್ಲದ ಕೀಟಗಳ ಆಕರ್ಷಣೆಗೆ “ಬಲೆ’ ಬೀಸಲಾಗಿದೆ. ತೊಗರಿ, ಅವರೆ, ತರಕಾರಿಗಳ ಇಳುವರಿಯಲ್ಲಿ ಪ್ರಮುಖ ಪಾತ್ರವಹಿಸುವ ನೋಮಿಯ, ಬಡಗಿ, ಎಲೆಕತ್ತರಿಸುವ ದುಂಬಿಗಳ ಗೂಡುಗಳನ್ನುಕೃತಕವಾಗಿ ನಿರ್ಮಿಸಿ, ಆಕರ್ಷಿ ಸುವ ಪ್ರಯತ್ನ ನಡೆದಿದೆ. ಉದಾಹರಣೆಗೆ ತೊಗರಿಯನ್ನು ಕಲಬುರಗಿ ಹಾಗೂ ಸುತ್ತಮುತ್ತ, ಟೊಮೆಟೊ ಅನ್ನು ಕೋಲಾರ ಮತ್ತಿತರ ಕಡೆಗಳಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.
Related Articles
Advertisement
ರಾಸಾಯನಿಕ ಸಿಂಪಡಣೆ ಕಾರಣ : ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಹೆಚ್ಚಾಗಿದೆ. ಅಲ್ಲದೆ, ಏಕರೂಪದ ಬೆಳೆ ಪದ್ಧತಿ ಗೀಳು ಅಂಟಿಕೊಂಡಿದೆ. ಇದರಿಂದ ಇತರೆ ಪರಾಗಸ್ಪರ್ಶಿ ದುಂಬಿಗಳು ಕಾಣೆಯಾಗುತ್ತಿವೆ. ಇದು ರೈತರಿಗೆ ಅರಿವಿಲ್ಲದೆ, ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದಲ್ಲದೆ, ಇವುಗಳಿಂದ ಜೇನುತುಪ್ಪ ಸಿಗುವುದಿಲ್ಲ ಎಂಬ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ. ಸ್ವಾಭಾವಿಕ ಗೂಡುಗಳನ್ನು ನಾಶಮಾಡುವ ಪ್ರವೃತ್ತಿ ಕೂಡ ಸಂತತಿ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ವಿಶ್ವದಾದ್ಯಂತ ಜೇನುನೊಣಗಳಲ್ಲದೆ, 20 ಸಾವಿರಕ್ಕೂ ಅಧಿಕ ಪರಾಗಸ್ಪರ್ಶಿ ಕೀಟಗಳ ಪ್ರಭೇದಗಳಿವೆ. ರಾಜ್ಯದಲ್ಲಿ ಇವುಗಳ ಪ್ರಮಾಣ ಸುಮಾರು 2,000ದಿಂದ 2,500 ಇರಬಹುದು ಎಂದು ಅಂದಾಜಿಸಲಾಗಿದೆ.
–ವಿಜಯಕುಮಾರ್ ಚಂದರಗಿ