ಲಂಡನ್: ಒಮ್ಮೆ ಕಲ್ಪಿಸಿಕೊಳ್ಳಿ… ಕೊತಕೊತ ಕುದಿಯುವ ವಾತಾವರಣ, ಬಂಡೆಗಳ ಮಳೆ, ಲಾವಾ ರಸದ ಅಲೆ ಹೊಮ್ಮಿಸುವ ಸಮುದ್ರ, ಕರಗಿ ನೀರಾಗುವ ತಾಪದಲ್ಲಿ ಬೀಸುವ ಸೂಪರ್‌ಸಾನಿಕ್ ವೇಗದ ಗಾಳಿ…
ಅಬ್ಬಬ್ಟಾ! ಬಹುಶಃ ಇದು ಬ್ರಹ್ಮಾಂಡದ “ನರಕ’. ಹೌದು, ಕಥೆ- ಕಲ್ಪನೆಗಳಲ್ಲಿ ವರ್ಣಿ ಸಲ್ಪಟ್ಟ ನರಕ ದಂಥ ಗ್ರಹ ಸೌರಮಂಡ ಲದಲ್ಲಿ ಪತ್ತೆಯಾಗಿದೆ. “ಕೆ2-141ಬಿ’ ಎಂಬ ಹೆಸರಿನ ಈ ಗ್ರಹ ಭೂಮಿ ಯಿಂದ 100 ಜ್ಯೋತಿರ್ವರ್ಷ ದೂರದಲ್ಲಿದೆ.
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಣ್ಣಿಗೆ ಬಿದ್ದಿರುವ “ಕೆ2-141ಬಿ’ ಗ್ರಹದಲ್ಲಿ ಎಲ್ಲವೂ ಭಯಾನಕ ವಿಚಿತ್ರ. ಭೂಗಾತ್ರದ ರಚನೆ ಹೊಂದಿ ರುವ ಈ ಗ್ರಹದಲ್ಲಿ 5,400 ಡಿಗ್ರಿ ಫ್ಯಾರನ್‌ಹೀಟ್ ಉಷ್ಣಾಂಶವಿದೆ ಎಂದು ಖಗೋಳ ತಜ್ಞರು ಊಹಿಸಿ ದ್ದಾರೆ. ಇಷ್ಟು ರೌದ್ರ ಉಷ್ಣಾಂಶಕ್ಕೆ ಇಲ್ಲಿನ ಬಂಡೆಗಳು ಕರಗುವುದಷ್ಟೇ ಅಲ್ಲ, ಆವಿಯಾಗುತ್ತವೆ. ಹಾಗೆ ಆವಿಯಾಗಿ, ಮಳೆ ರೂಪದಲ್ಲಿ ಅದೇ ಬಂಡೆಗಳು ಆಕಾಶದಿಂದ ಧೊಪಧೊಪನೆ ಬೀಳುತ್ತವೆ!
ಶಿಲಾಪಾಕ ಸಮುದ್ರ: ಇಲ್ಲೂ ಸಮುದ್ರವಿದೆ. ಆದರೆ ಅಲ್ಲಿ ನೀರಿಲ್ಲ. ಸಂಪೂರ್ಣ ಶಿಲಾಪಾಕ! ಸೋಡಿಯಂ, ಸಿಲಿಕಾನ್ ಮಾನೊಕ್ಸೆ„ಡ್ ಮತ್ತು ಸಿಲಿ ಕ ಾನ್ ಡೈಆಕ್ಸಡ್ ಖನಿಜಗಳೂ ಇಲ್ಲಿ ಬಿಸಿಪಾಕ ವಾಗಿ ಹರಿಯುತ್ತಿರಬಹುದು. ಮಳೆ ರೂಪದ ಬೀಳುವ ಬಂಡೆಗಳು ಸಮುದ್ರದಲ್ಲಿ ಅಂದಾಜು 60 ಮೈಲು ಆಳಕ್ಕಿಳಿಯಬಹುದು ಎಂದು ಊಹಿಸ ಲಾಗಿದೆ. ಇಲ್ಲಿನ ಭೂಪದರದ ಮೇಲೆ ಗಂಟೆಗೆ 3,100 ಮೈಲು ವೇಗದಲ್ಲಿ ಸೂಪರ್‌ಸಾನಿಕ್ ಗಾಳಿ ಬೀಸುತ್ತದೆ.
ಮ್ಯಾಕ್‌ಗಿಲ್ ವಿವಿ, ಯಾರ್ಕ್ ವಿವಿ, ಇಂಡಿ ಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಈ ಕುರಿತಾಗಿ “ಮಂಥಿÉ ನೋಟಿಸಸ್ ಆಫ್ ದಿ ರಾಯಲ್ ಅಸ್ಟ್ರೋನಾಮಿಕಲ್ ಸೊಸೈಟಿ’ ಎಂಬ ಆನ್‌ಲೈನ್ ಮ್ಯಾಗಜಿನ್‌ನಲ್ಲಿ ಲೇಖನ ಪ್ರಕಟಿಸಿದೆ.
ಕೆ2-141ಬಿ ಎನ್ನುವುದು ವಿಕಾಸ ಹಂತದ ಗ್ರಹ. ಲಕ್ಷಾಂತರ ವರ್ಷ ಗಳ ಹಿಂದೆ ಭೂಮಿಯೂ ಹೀಗೆಯೇ ಇತ್ತು. ಕ್ರಮೇಣ ತಣ್ಣಗಾಗಿದೆ.
ನಿಕೊಲಸ್ ಕೊವೊನ್, ವಿಜ್ಞಾನ ಲೇಖಕ