ಶಿಡ್ಲಘಟ್ಟ: ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್‌ನ ಪಠ್ಯ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಮೌಡ್ಯತೆಯನ್ನು ಬಿತ್ತಬಾರದು, ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಜೀತದಾಳು ಗಳ ಹಾಗೂ ಕೃಷಿ ಕೂಲಿಕಾರ್ಮಿಕರ ರಾಜ್ಯ ಸಮಾವೇಶದಲ್ಲಿ ಮಾತನಾಡಿ, ಸಮಾಜದಲ್ಲಿ ಬ್ರಾಹ್ಮಣತ್ವದ ಛಾಯೆ ಇನ್ನೂ ಸಾಕಷ್ಟು ಇದೆ ಮೌಡ್ಯಗಳನ್ನು ಬಿತ್ತಿ ಹಿಂದಕ್ಕೆ ಬದುಕು ಸಾಗುವಂತೆ ಮಾಡ ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯವನ್ನು ಆಳಿದ ಎಲ್ಲ ಸರಕಾರಗಳು ಸಹ ಭಗವದ್ಗೀತೆ, ರಾಮಾಯಣ, ಬೈಬಲ್, ಕುರಾನ್ ಗಳನ್ನು ಅಳವಡಿಸಿ ವಿದ್ಯಾರ್ಥಿಗಳಲ್ಲಿ ಜಾತಿ ಧರ್ಮ ವಿಷ ಬೀಜ ಬಿತ್ತಿ ಮೌಡ್ಯತೆಯನ್ನು ಹೆಚ್ಚಿಸುವ ಕೆಲಸ ಆಗುತ್ತಿರುವುದು ಬೇಸರ ತಂದಿದೆ ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ ಧರ್ಮಾಂದರಿಗೆ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆಯಿದ್ದು ಇಡೀ ಮನುಷ್ಯ ಕುಲ ಒಂದೇ ಎಂದು ಸಾರಿ ಹೇಳುವ ಮೂಲಕ ಸಂವಿಧಾನ ವನ್ನು ಅಕ್ಷರಶಃ ಜಾರಿಗೆ ತರುವ ಕೆಲಸ ಆಗಬೇಕು ಎಂದರಲ್ಲದೆ ಈಗಿನ ಸರ್ಕಾರಗಳು ಜಾತಿಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ವಿಶ್ವದಲ್ಲಿ ಗಂಡು, ಹೆಣ್ಣು ಎಂಬ ಎರಡು ಜಾತಿಗಳು ಬಿಟ್ಟರೆ ಉಳಿದವೆಲ್ಲವೂ ನಾವು ಮಾಡಿಕೊಂಡಿರುವುದು. ಹಾಗಾ ಗಿ ಜಾತಿ ಜಾತಿಗಳ ನಡುವೆ ಕಲಹವಿಟ್ಟು ರಾಜಕೀಯ ಮಾಡುವುದನ್ನು ಸರ್ಕಾರ ಗಳು ಬಿಡಬೇಕು ಎಂದರು.
ಪಟೇಲ್ ಚಾರಿಟಬಲ್ ಟ್ರಸ್ಟ್‌ನ ಎಚ್‌ಎಎಲ್ ದೇವರಾಜ್ ಮಾತನಾಡಿ ಸ್ವಾತಂತ್ರ್ಯ 70 ವರ್ಷ ಕಳೆದರು ಸಹ ದಲಿತರ ಕಾಲೋನಿಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ದಲಿತರು ಎಚ್ಚೆತ್ತುಕೊಳ್ಳಬೇಕು ಪ್ರತಿಯೊ ಬ್ಬರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಉನ್ನತಸ್ಥಾನಗಳನ್ನು ಅಲಂಕರಿಸಲು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಘೋಷಣೆ ಮಾಡಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಪ್ರತಿ ವರ್ಷ 500-700 ನಿರುದ್ಯೋಗಿ ಗಳಿಗೆ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಜೀವಿಕಾದ ರಾಜ್ಯ ಸಂಚಾಲಕ ಕಿರುಲ್ ಪ್ರಸಾದ್ ಮಾತನಾಡಿದರು. ಸಮಾವೇಶಕ್ಕೂ ಮುನ್ನ ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ನಡೆಯಿತು, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಜೀವಿಕ ತಾಲೂಕು ಸಂಚಾಲಕ ಶ್ರೀನಿವಾಸ್ ಇತರರು ಹಾಜರಿದ್ದರು.