ಭಾಲ್ಕಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಆರ್.ಎಸ್.ಕೆ ಉಪನಿರ್ದೇಶಕರ ಕಚೇರಿ ಬೀದರಿನ ಸಹಾಯಕ ನಿರ್ದೇಶಕ ಗುಂಡಪ್ಪಾ ಹುಡಗೆ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ 2021-22ರ ಜಿಲ್ಲಾಮಟ್ಟದ ಯೋಜನಾ ವರದಿ ಮೌಲ್ಯಮಾಪನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಸಮಾವೇಶದ ನೋಡಲ್ ಅಧಿಕಾರಿ ಮಂಜುನಾಥ ಬೆಳಕೇರೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಿಂದ ಸುಮಾರು 200 ಯೋಜನೆಗಳು ಬಂದಿವೆ ಎಂದರು.
ಇದೇ ವೇಳೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಕಲಬುರಗಿಯ ಜಂಟಿ ನಿರ್ದೇಶಕರ ಕಚೇರಿ ನಿವೃತ್ತ ಚಿತ್ರಕಲಾ ವಿಷಯ ಪರಿವೀಕ್ಷಕ ದೇವಿಂದ್ರಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಮಾಹಾರುದ್ರಪ್ಪ ಅಣದುರೆ, ರಾಜಕುಮಾರ, ಸಂಜೀವಕುಮಾರ ಸ್ವಾಮಿ, ನ್ಯಾಯವಾದಿ ಮಹೇಶ ರಾಚೋಟೆ ಇದ್ದರು. ಶೋಭಾ ಮಾಸಿಮಾಡೆ ಸ್ವಾಗತಿಸಿದರು. ಮಂಜುನಾತ ಬೆಳಕಿರೆ ನಿರೂಪಿಸಿದರು.