Advertisement
46 ಸೆಕ್ರೆಟರಿಗಳಿಗೆ “ಸೈನ್ಸ್’ ಹಿನ್ನೆಲೆ!ಈಗಿನ ಒಟ್ಟು 84 ಕಾರ್ಯದರ್ಶಿಗಳಲ್ಲಿ 46 ಮಂದಿ ಆಡಳಿತಾತ್ಮಕ ಸೇವೆಗೆ ಬರುವ ಮೊದಲೇ ವಿಜ್ಞಾನ ಪಾರಂಗತರು. ಇವರಲ್ಲಿ 28 ಮಂದಿ ಎಂಜಿನಿಯರ್! ಅಲ್ಲದೆ ಪ್ರಾಣಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಭೌತಶಾಸ್ತ್ರ, ಸಸ್ಯಶಾಸ್ತ್ರ ಓದಿದ ಚಾಣಾಕ್ಷರೂ ಇದ್ದಾರೆ. ಎಂಬಿಬಿಎಸ್ ಡಾಕ್ಟರ್‌ಗಳು, ಆಯುರ್ವೇದ ವೈದ್ಯರನ್ನೂ ಮೋದಿ ಟೀಂ ಒಳಗೊಂಡಿದೆ.
ಆಡಳಿತಾತ್ಮಕ ಸೇವೆಗೆ ಧುಮುಕಿದ 2020ರ ಬ್ಯಾಚ್‌ನಲ್ಲಿ ಶೇ.60 ಮಂದಿ ಎಂಜಿನಿಯರ್‌ಗಳೇ ಇದ್ದಾರೆ. ಪ್ರಸ್ತುತ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತಾತ್ಮಕ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 428ರಲ್ಲಿ 245 ಮಂದಿ (ಶೇ.57.25) ಎಂಜಿನಿಯರಿಂಗ್ ಹಿನ್ನೆಲೆಯವರು. ಇತರ 8 ಮಂದಿ ಎಂಜಿನಿಯರಿಂಗ್ ಪ್ಲಸ್ ಮ್ಯಾನೇಜ್‌ಮೆಂಟ್ ಓದಿದವರು. ಕೇವಲ 84 ಮಂದಿ ಮಾತ್ರವೇ ಆರ್ಟ್ಸ್ ಹಿನ್ನೆಲೆಯವರು. ಐಐಟಿ ಟ್ಯಾಲೆಂಟ್‌ಗಳೇ ಅಧಿಕ!
ದೇಶದ ವಿವಿಧ ಐಐಟಿಗಳಲ್ಲಿ ಪದವಿ ಪೂರೈಸಿದ ಹಲವರು ಮೋದಿ ಆಡಳಿತಕ್ಕೆ ವೇಗ ತುಂಬಿದ್ದಾರೆ. 28 ಎಂಜಿನಿಯರ್‌ಗಳಲ್ಲಿ 22 ಮಂದಿ, ಐಐಟಿಯಿಂದ ಹೊರಹೊಮ್ಮಿದ ಪ್ರತಿಭೆಗಳು! (ಐಐಟಿ ಕಾನ್ಪುರ- 13, ಐಐಟಿ ದೆಹಲಿ- 7, ಐಐಟಿ ಮದ್ರಾಸ್-1, ಐಐಟಿ ಬಾಂಬೆ-1)
Related Articles
ಕಾನ್ಪುರ ಐಐಟಿ: ರಕ್ಷಣ ಕಾರ್ಯದರ್ಶಿ ಡಾ| ಅಜಯ್ ಕುಮಾರ್, ರಕ್ಷಣ ಉತ್ಪನ್ನ ಕಾರ್ಯದರ್ಶಿ ರಾಜ್ ಕುಮಾರ್, ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ, ನಾಮಸೂಚಕ ಸಚಿವಾಲಯದಡಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಶುತೋಶ್ ಶರ್ಮಾ (ನ್ಯಾನೊ ಟೆಕ್ನಾಲಜಿ ಪ್ರವೀಣ), ವಿತ್ತ ಸಚಿವಾಲಯದ ಕಂದಾಯ ವಿಭಾಗದ ನಿರ್ದೇಶಕ ಡೈರೆಕ್ಟರ್.
Advertisement
ಡಾ| ಎ.ಬಿ.ಪಿ. ಪಾಂಡೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕಾರ್ಯದರ್ಶಿ ಪ್ರವೀಣ್ ಕುಮಾರ್, ಇತರ ಇಲಾಖೆಗಳ ನಿರ್ದೇಶಕರಾದ ಡಾ| ಸಂಜೀವ್ ರಂಜನ್, ದುರ್ಗಾಶಂಕರ್ ಮಿಶ್ರಾ, ಉಪೇಂದ್ರ ಸಿಂಗ್, ಸಂಜಯ್ ಅಗರ್ವಾಲ್, ರಾಮೇಶ್ವರ್ ಪ್ರಸಾದ್ ಗುಪ್ತಾ, ಇಂದುಶೇಖರ್ ಚತುರ್ವೇದಿ, ಸಂಜೀವ್ ಗುಪ್ತಾ.
ಐಐಟಿ ದೆಹಲಿ: ಕಾರ್ಯದರ್ಶಿಗಳಾದ ಯೋಗೇಂದ್ರ ತ್ರಿಪಾಠಿ, ದೀಪಕ್ ಖಾಂಡೇಕರ್, ಪ್ರದೀಪ್ ಖಾಜ್ರೋಲಾ, ರಾಜೇಶ್ ವರ್ಮಾ, ಅಜಯ್ ಸಾವ್ನೆ, ಅಪೂರ್ವ ಚಂದ್ರ.
ಐಐಟಿ ಮದ್ರಾಸ್: ಗಿರಿಧರ್ ಅರಮನೆ (ಸಾರಿಗೆ ಇಲಾಖೆ ಕಾರ್ಯದರ್ಶಿ)
ಐಐಟಿ ಬಾಂಬೆ: ಕೆ. ಶಿವನ್ (ಇಸ್ರೋ ಅಧ್ಯಕ್ಷ)