Advertisement

ಗಿಣಗೇರಿ ಕೆರೆ ತಟದಲ್ಲಿ ಸೈನ್ಸ್ ಪಾರ್ಕ್‌ಗೆ ಚಿಂತನೆ

07:33 PM Mar 26, 2021 | Team Udayavani |

ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಂಕಲ್ಪದಂತೆ ತಾಲೂಕಿನ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಕೆರೆ ಹೂಳೆತ್ತಿದ ಬಳಿಕ ಅಂದಾಜು 12 ಎಕರೆ ಜಾಗದಲ್ಲಿ ಸೈನ್ಸ್‌ ಪಾರ್ಕ್‌ ಮಾಡುವ ಕುರಿತಂತೆ ಶ್ರೀಗಳು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಹೂಳೆತ್ತುವ ತಂಡದ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಇದರಿಂದ ಜಿಲ್ಲೆಯಶಾಲಾ ಮಕ್ಕಳಿಗೆ ಪ್ರವಾಸ ತಾಣದ ಜೊತೆಗೆ ಅವರ ಶೈಕ್ಷಣಿಕ ಕಲಿಕೆಗೂ ಪೂರಕವಾಗಲಿದೆ.

Advertisement

ಹೌದು.. ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಯೋಚನಾ ಲಹರಿಯೇ ವಿಭಿನ್ನ ಹಾಗೂ ವಿಶಿಷ್ಠತೆಯಿಂದ ಕೂಡಿರುತ್ತದೆ ಎಂಬುದಕ್ಕೆ ಇಂತಹ ಆಲೋಚನೆಗಳೇ ಸಾಕ್ಷಿ. ಕೇವಲ ಕೆರೆ ಹೂಳೆತ್ತಿ, ನೀರು ನಿಲ್ಲಿಸಿ, ಪ್ರವಾಸಿ ತಾಣವನ್ನಾಗಿ ಮಾಡಿದರಷ್ಟೇ ಸಾಲದು.ಪ್ರವಾಸಿಗರಿಗೆ ಮುದ ನೀಡುವ ಜೊತೆಗೆ ಶಾಲಾಮಕ್ಕಳು ಇಲ್ಲಿಗೆ ಪ್ರವಾಸ ಕೈಗೊಂಡಾಗ ಅವರ ಕಲಿಕೆಗೆ ಉಪಯುಕ್ತವಾಗುವ ರೀತಿಯಲ್ಲಿ ಸೈನ್ಸ್‌ ಪಾರ್ಕ್‌ನಿರ್ಮಾಣ ಮಾಡಬೇಕೆಂಬ ಚಿಂತನೆ ನಡೆದಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಸೈನ್ಸ್‌ ಪಾರ್ಕ್‌ ಮುಂದಿನ ದಿನದಲ್ಲಿ ತುಂಬಾ ಉಪಯುಕ್ತವಾಗಲಿದೆ. ಇಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಮಾನವನ ದೇಹದ ಆಕೃತಿ, ತಲೆ, ಮಿದುಳು, ಹೃದಯ, ಕೈ, ಕಾಲುಗಳು, ಗಣಿತ ವಿಷಯಕ್ಕೆ ಸಂಬಂಧಿಸಿ ಆಯತ, ತ್ರಿಭಜ, ಚೌಕ, ಸೊನ್ನೆಯಂತಆಕೃತಿಗಳನ್ನು ನಿರ್ಮಿಸಲಾಗುವುದು. ಮಕ್ಕಳು ಶಿಕ್ಷಣದತ್ತ ಒಲವು ತೋರುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿವರ್ಷ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳ ವತಿಯಿಂದಲೇ ಶೈಕ್ಷಣಿಕ

ಪ್ರವಾಸ ನಡೆಯುತ್ತವೆ. ಅಂತಹ ಸಂದರ್ಭದಲ್ಲಿಗಿಣಗೇರಿ ಕೆರೆ ಸ್ಥಳಕ್ಕೆ ವಿದ್ಯಾರ್ಥಿಗಳನ್ನು ಕರೆ ತಂದು ಅವರಿಗೆ ಅಲ್ಲಿನ ವಿಜ್ಞಾನ, ಸಮಾಜ, ಗಣಿತ ವಿಷಯ ಸಂಬಂಧಿತ ವಸ್ತು, ಆಕೃತಿಗಳನ್ನು ತೋರಿಸುವ ಮೂಲಕ ಶಿಕ್ಷಕರು ಸ್ಥಳ ಪಾಠ ಮಾಡುವುದು, ಅದರ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡುವ ಕಾರ್ಯ ನಡೆಯಲಿದೆ. ಸೈನ್ಸ್‌ಪಾರ್ಕ್‌ಗೆ ಬೇಕಾದ ಸಾಮಗ್ರಿಗಳನ್ನು ಜನರು ನೀಡುವ ದೇಣಿಗೆ ಹಣದಲ್ಲಿ ಖರೀದಿ ಮಾಡುವುದು. ಇಲ್ಲವೇಸರ್ಕಾರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಅನುದಾನದ ನೆರವಿನಿಂದ ಸಾಮಗ್ರಿ ಖರೀದಿಸಿ ಪಾರ್ಕ್‌ ನಿರ್ಮಿಸುವ ಚಿಂತನೆ ನಡೆದಿದೆ. ಈ ಕುರಿತಂತೆ

ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಅವರು ಕೆರೆಯ ತಟದಲ್ಲೇ ಸಮಾಲೋಚನೆ ನಡೆಸಿದ್ದಾರೆ.

Advertisement

ಅರಣ್ಯೀಕರಣಕ್ಕೆ ಒತ್ತು: ಕೆರೆ ಹೂಳೆತ್ತುವ ಜೊತೆಗೆ ಸುತ್ತಲೂ ಹಾಗೂ ಕೆರೆಯ ಖಾಲಿ ಜಾಗದಲ್ಲಿ ಅರಣ್ಯೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.ಹೂಳೆತ್ತುವ ಕಾರ್ಯ ಮುಗಿದ ನಂತರ ಕೆರೆಯ ಸುತ್ತಲೂ ಬಗೆ ಬಗೆಯ ಗಿಡಗಳನ್ನು ನೆಡುವುದು,ಕೆಲವೊಂದು ಔಷ ಧಿಯ ಗಿಡಗಳನ್ನು ನೆಡುವುದು, ಇನ್ನು ಕೆಲವು ಹೂವಿನ ಗಿಡಗಳನ್ನು ನೆಟ್ಟುಇದನ್ನೊಂದು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಜನರನ್ನು ಆಕರ್ಷಿಲು ಚಿಂತನೆ ನಡೆದಿದೆ. ಇದಲ್ಲದೇಕೆರೆಯ ಮಧ್ಯದಲ್ಲಿ ನಡುಗಡ್ಡೆ ಮಾಡಿ ಅಲ್ಲಿ ಪಾರ್ಕ್‌ ನಿರ್ಮಿಸಿ ಜನರು ಬೋಟ್‌ ಮೂಲಕ ತೆರಳಲು ವ್ಯವಸ್ಥೆ ಕೈಗೊಳ್ಳುವಂತ ಯೋಜನೆ ಹಾಕಲಾಗಿದೆ.

ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯ ಸಾಂಘವಾಗಿ ನಡೆದಿದೆ. ದಾನಿಗಳುಮುಂದೆ ಬಂದು ಹೂಳೆತ್ತುವ ಕಾರ್ಯಕ್ಕೆ ನೆರವುನೀಡುತ್ತಿದ್ದಾರೆ. ಆ ಗವಿಸಿದ್ದೇಶ್ವರ ಸ್ವಾಮಿಗಳಆಶೀರ್ವಾದದಿಂದ ಮುಂದಿನ ದಿನದಲ್ಲಿಕೆರೆಯ ಚಿತ್ರಣವೇ ಬದಲಾಗಲಿದೆ. ಅಲ್ಲದೇ,ಶಾಲಾ ಮಕ್ಕಳಿಗಾಗಿ ಕೆರೆಯ ಖಾಲಿ ಜಾಗದಲ್ಲಿ ಸೈನ್ಸ್‌ ಪಾರ್ಕ್‌ ನಿರ್ಮಿಸುವ ಕುರಿತಂತೆ ಶಾಸಕರು, ಶ್ರೀಗಳು, ಜಿಲ್ಲಾಧಿಕಾರಿ ಚಿಂತನೆ ನಡೆಸಿದ್ದಾರೆ. ಸೈನ್ಸ್‌ ಪಾರ್ಕ್‌ಗೆ ಬೇಕಾದ ಅಗತ್ಯ ಅನುದಾನದ ಕುರಿತು ಚರ್ಚಿಸಲಾಗಿದೆ. ಜೊತೆಗೆ ಕೆರೆಯ ಸುತ್ತಲು ಅರಣ್ಯೀಕರಣ, ನಡುಗಡ್ಡೆ ಮಾಡುವ ಕುರಿತಂತೆಯೂ ಚರ್ಚೆ ನಡೆದಿದೆ.  –ಗೂಳಪ್ಪ ಹಲಗೇರಿ, ಕರಿಯಪ್ಪ ಮೇಟಿ, ಗಿಣಗೇರಿ ಮುಖಂಡರು.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next