Advertisement
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರವಿವಾರ ನಡೆದ ವಿಜ್ಞಾನ ಸಮಾವೇಶದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ನನಗೆ ಖಗೋಳ ವಿಜ್ಞಾನಿಗಳೆಂದರೆ ಬಹಳ ಆಸಕ್ತಿ ಇತ್ತು. ಖಗೋಳಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೆ. ಅಣು ಮತ್ತು ಬೆಳಕಿಗೆ ಇರುವ ಸಂಬಂಧವನ್ನು ಕುತೂಹಲದಿಂದ ಅಧ್ಯಯನ ಮಾಡಿದ್ದೇನೆ ಎಂದು ಅವರು ಹೇಳಿದರು. ಬೆಳಕಿನ ವಿಭಜನೆ ಪ್ರಕ್ರಿಯೆಯ ಹಲವು ಆಯಾಮಗಳು ಇಂದಿಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಸ್ಮಯವಾಗಿಯೇ ಉಳಿದಿವೆ. ಈ ಕುತೂಹಲ ಜಗತ್ತಿನಲ್ಲಿ ವಿಜ್ಞಾನವನ್ನು ಅತ್ಯಂತ ಆಸಕ್ತಿದಾಯಕ ವಿಷಯವನ್ನಾಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಮೆರಿಕದ ಬಫೆಲೊ ವಿ.ವಿ. ಅಧ್ಯಕ್ಷ ಪ್ರೊ| ಸತೀಶ್ ಕೆ. ತ್ರಿಪಾಠಿ ಮಾತನಾಡಿ, ಜೀವನದಲ್ಲಿ ದೀರ್ಘ ಕಾಲದ ಗುರಿ ಇರಿಸಿಕೊಂಡು ಮಹತ್ತಾ$Ìಕಾಂಕ್ಷಿ ಆಗಿ ಬದಲಾವಣೆಗೆ ಸಿದ್ಧವಾಗುವುದು, ಸ್ವಾವಲಂಬಿ ಆಗಿರುವುದು ಮುಖ್ಯ ಎಂದು ಹೇಳಿದರು. ಬ್ರಹ್ಮೋಸ್ ಏರೋ ಸ್ಪೇಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೈಸ್ ಅಡ್ಮಿರಲ್ ಎನ್.ಎನ್. ಕುಮಾರ್ ಅವರು, ಬ್ರಹ್ಮೋಸ್ ಸಾಗಿ ಬಂದ ದಾರಿಯನ್ನು ವಿವರಿಸಿದರು. ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಮಾರ್ಗದರ್ಶನದಲ್ಲಿ ಪ್ರಥಮ ಬಾಹ್ಯಾಕಾಶ ಉಡಾವಣಾ ವಾಹನ (ಎಸ್‌ಎಲ್‌ವಿ3) ಹೇಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು ಎಂಬ ಅನುಭವ ಹಂಚಿಕೊಂಡರು.
Related Articles
Advertisement