Advertisement

ವೈಜ್ಞಾನಿಕ ಮನೋಭಾವನೆಗೆ ವಿಜ್ಞಾನ ಮೇಳ ಪೂರಕ

11:59 AM Sep 11, 2017 | |

ಭಾಲ್ಕಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕವಾಗಿವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಪಂಡಿತ ಬಾಳೂರೆ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಖಡಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಬೀದರ ಜಿಲ್ಲಾ ಘಟಕದ ವತಿಯಿಂದ ರವಿವಾರ ನಡೆದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಲ್ಲಿರುವ ಪ್ರತಿಭೆ ಹೊರತರಲು ಇಂತಹ ವಿಜ್ಞಾನ ಮೇಳ ಆಯೋಜಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ನಡೆಸುತ್ತಿರುವ ಜ್ಞಾನ
ಮೇಳ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅವರಲ್ಲಿ ವೈಜ್ಞಾನಿಕ ಮನೋಭಾವ ತುಂಬಿ, ವಿದ್ಯಾರ್ಥಿಗಳಿಂದಲೇ ಹೊಸ ಆವಿಷ್ಕಾರ ರೂಪಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಕಾರಣಿಭೂತರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ತಜ್ಞ ಮನ್ಸೂರ್‌ ಆವಂಟಿ, ವಿಜ್ಞಾನ ಮೇಳದಲ್ಲಿ ಭಾಗವಹಿಸಿರುವ ತೀರ್ಪುಗಾರರು, ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌.ಬಿ. ಸಜ್ಜನಶೆಟ್ಟಿ ಮಾತನಾಡಿ, ಜ್ಞಾನ ಮತ್ತು ವಿಜ್ಞಾನಗಳ ಸಂಗವೇ ಜ್ಞಾನ-ವಿಜ್ಞಾನ ಮೇಳವಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿ, ಅವರಿಂದ ಸಾಕಷ್ಟು ವಿಷಯ ಕಲಿಯುವುದೇ ಮೇಳದ ಉದ್ದೇಶವಾಗಿದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಾವು ತಯಾರಿಸಿಕೊಂಡು ಬಂದ ವಿಜ್ಞಾನ ವಸ್ತುಗಳ ಮಾದರಿ ಪ್ರದರ್ಶಿಸಿ, ಅವುಗಳಿಗೆ ವಿವರಣೆ ನೀಡಿದರು. ರೇವಣಸಿದ್ದಪ್ಪ ಜಲಾದೆ, ಮಹಿಪಾಲ ರೆಡ್ಡಿ, ವಿಜ್ಞಾನ ಸಂಪನ್ಮೂಲ ವ್ಯಕ್ತಿ ಮಾರುತಿ ಸಗರ, ಡಿ. ಸುಧಾಕರ, ವಿಠ್ಠಲ ದೇಶಪಾಂಡೆ, ಸುರೇಶ ಮಸೂಳೆ, ಸತೀಶ ಸಿದ್ದೇಶ್ವರೆ, ಬಸವಪ್ರಭು ಸೋಲಾಪುರೆ, ಕಿಶನರಾವ ಜಾಧವ, ರಾಜಕುಮಾರ ಹೂಗಾರ, ಶಿವಕುಮಾರ ಘಂಟೆ, ದಿಲೀಪ ಘಂಟೆ ಇದ್ದರು.

ಖಡಕೇಶ್ವರ ವಿದ್ಯಾಮಂದಿರದ ಕಾರ್ಯದರ್ಶಿ ಸುಧಾಕರ ದೆಶಪಾಂಡೆ ಸ್ವಾಗತಿಸಿದರು. ಮುಖ್ಯಶಿಕ್ಷಕ ಆನಂದ ಕಲ್ಯಾಣೆ ನಿರೂಪಿಸಿದರು. ಪ್ರಕಾಶ ರುದನೂರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next