ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ ಸೈನ್ಸ್ ಸಿಟಿ ಅಥವಾ ಸೈನ್ಸ್ ಸೆಂಟರ್ ಮಹತ್ವದ್ದಾಗಿದೆ. ಇನ್ನೊಂದೆಡೆ ಗಂಗಾವತಿ – ಕಾರಟಗಿವರೆಗೆ 28 ಕಿ.ಮೀ ದೂರದ ಹೊಸ ರೈಲು ಮಾರ್ಗ ನಿರ್ಮಾಣಕ್ಕೂ ಹಣ ನಿಗದಿಗೊಳಿಸಲಾಗಿದೆ. ರೈಲ್ವೆಯ 14 ಮಾರ್ಗಗಳ ಗೇಜ್ ಪರಿವರ್ತನೆ ಹಾಗೂ ಮೂರು ಮಾರ್ಗಗಳ ವಿದ್ಯುದೀಕರಣಕ್ಕೂ ನಿರ್ಧರಿಸಲಾಗಿದೆ. ಆದರೆ ಯಾವುದೇ ಹೊಸ ರೈಲು ಘೋಷಣೆ ಮಾಡಲಾಗಿಲ್ಲ. ಸೈನ್ಸ್ ಸಿಟಿ ಸ್ಥಾಪನೆಗೆ ಕೇವಲ 47 ಕೋಟಿ ರೂ. ನೀಡಲಾಗಿದ್ದು, ಈ ಮೊತ್ತ ಯೋಜನೆಗೆ ಸಾಲದು ಎಂಬ ಅಭಿಪ್ರಾಯ ಕೇಳಿಬಂದಿದೆ. ಕರ್ನಾಟಕದ ಜತೆಗೆ ಇತರ ಹಲವು ರಾಜ್ಯಗಳಲ್ಲೂ ಸೈನ್ಸ್ ಸಿಟಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.
ಯೋಜನೆಗಳು
ಕರ್ನಾಟಕದಲ್ಲಿ ಸೈನ್ಸ್ ಸೆಂಟರ್ ಅಥವಾ ಸೈನ್ಸ್ ಸಿಟಿ ನಿರ್ಮಾಣಕ್ಕೆ 47 ಕೋಟಿ ರೂ.
ಕೇಂದ್ರೀಯ ವಿದ್ಯುತ್ ಸಂಶೋಧನೆ ಸಂಸ್ಥೆಯ ಅಭಿವೃದ್ಧಿಗೆ 150 ಕೋಟಿ ರೂ.
ಐಐಎಸ್‌ಸಿ ಬೆಂಗಳೂರಿನಲ್ಲಿ ನ್ಯಾನೋ ಎಲೆಕ್ಟ್ರಾನಿಕ್ಸ್ ಕೋರ್ಸ್ ಆರಂಭಿಸಲು ಅನುದಾನ
ಸಿಎಂಟಿಐ ಬೆಂಗಳೂರು ಹಾಗೂ ಐಐಎಸ್‌ಸಿ ಬೆಂಗಳೂರಿನಲ್ಲಿ ಪರಿಣಿತಿ ಕೇಂದ್ರ ಹಾಗೂ ಐಐಎಸ್‌ಸಿ ಬೆಂಗಳೂರಿನಲ್ಲಿ ಕಾಮನ್
ಇಂಜಿನಿಯರಿಂಗ್ ಫೆಸಿಲಿಟಿ ಕೇಂದ್ರಕ್ಕೆ ಅನುದಾನ ಸ್ಟಾರ್ಟಪ್ ಇಂಡಿಯಾಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಐಐಎಸ್‌ಸಿ ಬೆಂಗಳೂರಿನಲ್ಲಿ ಸಂಶೋಧನೆ ಪಾರ್ಕ್
ವಿದ್ಯುದೀಕರಣ ಯೋಜನೆ: ಕಲಬುರಗಿ – ಅಕಲಕೋಟ್
ಗುಂತಕಲ್ – ಕಲ್ಲೂರು 40 ಕಿ.ಮೀ
ಮೀರಜ್ – ಬೆಳಗಾವಿ 137 ಕಿ.ಮೀ
ರೈಲ್ವೆ ಹೊಸ ಮಾರ್ಗ ಗಂಗಾವತಿ – ಕಾರಟಗಿ (28 ಕಿ.ಮೀ.)