Advertisement

UV Fusion: ಬದುಕುಳಿಯುವ ಆಸೆ ಮತ್ತು ವಿಜ್ಞಾನ

11:29 AM Nov 21, 2023 | Team Udayavani |

ಬದುಕುಳಿಯುವ ಆಸೆ ನವಜಾತ ಶಿಶುವಿನಿಂದ ಹಿಡಿದು ಜೀವನದ ಕೆಲವು ದಿನಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದ ವೃದ್ಧರಲ್ಲಿಯೂ ಇರುತ್ತದೆ. ತನ್ನ ಆಯಸ್ಸು ಇಷ್ಟೇ ಎಂದು ತಿಳಿದಿದ್ದರು ಹಲವರು ದೇವರಲ್ಲಿ ವಿವಿಧ ತರಹದ ಬೇಡಿಕೆ ನೀಡುವುದನ್ನು ಕಾಣಬಹುದು. ಈ ಅಪರಿಮಿತ ಆಸೆಗಳೆ ವಿಜ್ಞಾನದ ಅಥವಾ ಆವಿಷ್ಕಾರದ ಉಗಮಕ್ಕೆ ಕಾರಣವಾಯಿತು ಎಂದರೆ ತಪ್ಪಾಗದು.

Advertisement

ಇದನ್ನು ನಾವು ಈ ರೀತಿಯಾಗಿ ತಿಳಿಯೋಣ. ಕಾಡಿನಲ್ಲಿ ಮಾಂಸಾಹಾರಿಗಳು ಮತ್ತು ಸಸ್ಯಹಾರಿ ಎರಡು ಪ್ರಭೇದ ಪ್ರಾಣಿಗಳು ಜೊತೆಯಾಗಿ ಬದುಕುತ್ತಿರುತ್ತವೆ. ಬಹುದಿನದಿಂದ ಹಸಿವಿನಿಂದ ಬಳಲುತ್ತಿದ್ದ ಸಿಂಹ ನಾನು ಬೇಟೆಯಾಡಲು ಯಶಸ್ವಿಯಾಗದಿದ್ದರೆ ಬದುಕುಳಿಯಲಾರೆ ಎಂದು ಯೋಚಿಸುತ್ತಿರುವ ಅಷ್ಟರಲ್ಲಿ  ಅಲ್ಲೇ ಹುಲ್ಲು ಮೇಯುತ್ತಿರುವ ಜಿಂಕೆಯನ್ನು ಕಂಡು ಸಿಂಹದ ಕಣ್ಣುಗಳು ಅದರ ಹೊಟ್ಟೆಗೆ ಆಸೆ ಹುಟ್ಟುವಂತೆ ಮಾಡಿ ಕಾಲುಗಳನ್ನು ಓಡುವಂತೆ ಪ್ರೇರೇಪಿಸುತ್ತದೆ. ಇತ್ತ ಸಿಂಹವನ್ನು ಕಂಡ ಜಿಂಕೆ ಇಂದು ನಾನು ನನ್ನಲ್ಲಿನ  ಎಲ್ಲ  ಬಲವನ್ನು ಹಾಕಿ ಓಡದಿದ್ದರೆ ನಾನು ನಾಳೆ ಸೂರ್ಯನನ್ನು ನೋಡಲಾರೆ ಎಂದು ಧಾವಿಸುತ್ತದೆ. ಇಬ್ಬರ ಓಟ ಬದುಕುಳಿಯುವುದಕ್ಕಾಗಿ.

ಹೀಗೆ ಪ್ರತಿಯೊಂದು ಜೀವಿ ಜಂತುಗಳಲ್ಲಿಯೂ ಬದುಕುವ ಆಸೆ ಅತೀವವಾಗಿ ಇರುತ್ತದೆ. ಹೀಗಿರುವಾಗ ಆಸೆಯೇ ಮಾನವ ಜೀವನದ ಮೂಲಾಧಾರ.

ಪ್ರಪಂಚದಲ್ಲಿ ಯಾರೂ ತಮ್ಮ ಐಶ್ವರ್ಯದಿಂದ ತೃಪ್ತರಾಗಿಲ್ಲ. ಎಷ್ಟಿದ್ದರೂ ಇನ್ನಷ್ಟು ಮತ್ತಷ್ಟು ಸಂಗ್ರಹಿಸಲು ಬಯಸುತ್ತಾರೆ. ಹಾಸಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆತರ ಕೆಲವರು ತಮ್ಮ ಜಾಣತನದಿಂದ ತೃಪ್ತರಾಗುತ್ತಾರೆ. ಯಾವಾಗ ಹಣ ಜೀವನದಲ್ಲಿ ಎಷ್ಟು ಮುಖ್ಯವಲ್ಲ ಎಂದು ತಿಳಿಯುತ್ತದೆಯೋ ಅಂದು ಆತ ಜಗತ್ತಿನ ಹುಳುವಿನ ಬಗ್ಗೆ ಯೋಚಿಸುವನು.

ಹಣ ಗಳಿಸುವ ಅನೇಕ ಉದ್ಯೋಗಗಳಿದ್ದರೂ ಬಹಳಷ್ಟು ಜನ ಇಂದಿಗೂ ಸಹ ವಿಜ್ಞಾನಿಯಾಗಲು ಬಯಸುತ್ತಾರೆ. ಸಂಶೋಧನೆಯಿಂದ ನಾನೇನು ಪಡೆದೆ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಆಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ನಿಸರ್ಗದ ರಹಸ್ಯವನ್ನು ಕಂಡುಹಿಡಿವ ಸಂತೋಷದ ಕ್ಷಣಗಳಿಗೆ ಪಾರವೆ ಇರುವುದಿಲ್ಲ.

Advertisement

ನಮ್ಮ ವಸುಂದರೆ ಮೇಲೆ ಸ್ವಾಭಾವಿಕ ಪ್ರಕೃತಿ ವಿಕೋಪ ಗಳಾಗುತ್ತಿರುತ್ತವೆ. ಅದರಲ್ಲಿ ಭೂಕಂಪವು ಒಂದು ಆದರೆ ಇಂದು ಇನ್ನೊಂದು ರಾಷ್ಟ್ರದಿಂದ ಮುಂದುವರೆದ ಮತ್ತು ಅತಿಯಾದ ಬದುಕುಳುವಾಸೆಯಿಂದ ನೈಸರ್ಗಿಕವಾಗಿ ಆಗುತ್ತಿರುವ ಭೂಕಂಪ ಯಾವುದು, ಅಣ್ವಸ್ತ್ರ ಶಕ್ತಿಯ ಪರೀಕ್ಷೆಯಿಂದ ಆಗುತ್ತಿರುವ ಕಂಪನ ಯಾವುದು ಎಂದು ತಿಳಿಯುವುದು ಕಷ್ಟವಾಗಿದೆ.

ಈ ಅನ್ವೇಷಣೆಯ ಹಾದಿಯ ಕ್ರಮೇಣ ತನ್ನ ಪಥವನ್ನು ಬದಲಿಸಲು ಪ್ರಾರಂಭಿಸುತ್ತದೆ. ಇತರ ರಾಷ್ಟ್ರಗಳಿಂದ ಬಲಿಷ್ಠ ವಾಗಬೇಕೆಂಬ ಆಸೆಯಿಂದ ಹಲವಾರು ಮಾರಕ ಅನಿಮಿಷಣೆಗೆ ವಿಜ್ಞಾನಿಗಳು ಕೈ ಹಾಕುತ್ತಾರೆ. ಇದೇ ಸಮಯದಲ್ಲಿ ಹಲವು ರಾಜಕೀಯ ಶಕ್ತಿಗಳು ಆಡುವ ಹೋಗಿದೆ ತುಪ್ಪ ಸರಿಯಾಗಿ ಕೆಲಸ ಮಾಡುತ್ತಾರೆ. ಹೀಗೆ ವಿಜ್ಞಾನ ಅಪಾಯವಾಗಿ ಸಂಭವಿಸುತ್ತದೆ.

ವಿಶ್ವದ ಉಳಿತಿಗಾಗಿ ಆವಿಷ್ಕಾರಗಳನ್ನು ಮಾಡಬೇಕೆ ಹೊರತು ನಾಶಕ್ಕಾಗಲ್ಲ. ಎಂದು ನಾವು ಮೂಲ ವಿಜ್ಞಾನವನ್ನು ಸಮನಾಗಿ ಅರ್ಥ ಮಾಡಿಕೊಳ್ಳುವೇವೋ ಒಂದು ಅಥವಾ ನಮ್ಮ ಪೋಷಕನಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಮನುಕುಲದ ರಕ್ಷಣೆಗೆ ವಿಜ್ಞಾನದ ಮೂಲ ಉದ್ದೇಶವಾಗಿರಬೇಕು.

ಒಟ್ಟಿನಲ್ಲಿ ಮಾನವನ ಬದುಕುಳಿಯುವ ಆಸೆಗೆ ಹೇಗೆ ಕೊನೆಯಿಲ್ಲವೋ, ಅದೇ ರೀತಿ ವಿಜ್ಞಾನದ ಆವಿಷ್ಕಾರಗಳಿಗೂ ಕೊನೆಯಿಲ್ಲ.

 -ವಾಣಿ ದಾಸ್‌

ಉಮ್ಮಚ್ಚ್ಗಿ

Advertisement

Udayavani is now on Telegram. Click here to join our channel and stay updated with the latest news.

Next