Advertisement
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾವು ನಮ್ಮ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುತ್ತಿಲ್ಲ. ಇದನ್ನು ದತ್ತು ಯೋಜನೆ ಎಂದು ಹೇಳಿದ್ದು ಯಾರು? ವಿಷಯಗಳನ್ನು ಬೇರೆ ಹಾದಿಗೆ ಕೊಂಡೊಯ್ಯುವ ತಮ್ಮ ದುಬುìದ್ಧಿಯನ್ನು ಬಿಜೆಪಿಯವರು ಬಿಡಬೇಕು ಎಂದು ಅವರು ಟೀಕಿಸಿದರು.
ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ನಮಗೆ ನೇಮಕಾತಿ ಅವಕಾಶ ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಈ ವರ್ಷ 43 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದರು.
Related Articles
ರಾಜ್ಯದಲ್ಲಿ ಶಿಕ್ಷಣದ ಕೊರತೆ ಇರುವ ಜಾಗದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆ ಹೊಂದಿರುವವರ ನೆರವಿನಿಂದ ಸಿಎಸ್‌ಆರ್ ಅನುದಾನದಿಂದ ಹೆಚ್ಚಿನ ಶಾಲೆ ತಲೆ ಎತ್ತುವಂತೆ ಮಾಡಲು ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸರ್ಕಾರದ ದುಡ್ಡು ಇಲ್ಲದೇ ಸಿಎಸ್‌ಆರ್‌ನಲ್ಲಿ ಒಂದು ಪಟ್ಟಿ ಮಾಡುತ್ತೇವೆ. ಸಿಎಸ್‌ಆರ್‌ನಲ್ಲಿ ಶಾಲೆಗಳಿಗೆ ನೆರವು ನೀಡಲು ಬರುವವರಿಗೆ ಒಂದು ಶಾಲೆಗಳ ಮಾದರಿ ಕೊಡುತ್ತೇವೆ. ಅವರು ಆ ಮಾದರಿಯ ಶಾಲೆಗಳನ್ನು ಕಟ್ಟಿ ಕೊಡಬೇಕು. ರಾಜ್ಯಾದ್ಯಂತ ಬಹಳಷ್ಟು ಶಿಕ್ಷಣ ಸಂಸ್ಥೆಯವರು ಇದ್ದಾರೆ. ಒಂದೊಂದು ಶಿಕ್ಷಣ ಸಂಸ್ಥೆಗಳೂ ಒಂದೊಂದು ಶಾಲೆಗಳನ್ನು ದತ್ತು ಪಡೆದು ನಿರ್ವಹಣೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅನುಕೂಲ ಮಾಡಬೇಕು ಎಂದು ವಿವರಿಸಿದರು.