ಎದುರಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೊಳಚೆ ನೀರು ಸ್ವತ್ಛಗೊಳಿಸಿ ಮಕ್ಕಳು
ಶಾಲೆಗೆ ತೆರೆಳಲು ಅನುಕೂಲ ಮಾಡಿಕೊಡಬೇಕೆಂದು ಎಂದು ಪಾಲಕರು ಆಗ್ರಹಿಸಿದ್ದಾರೆ. ಶಾಲೆ ಸುತ್ತ ಕೊಳಚೆ ನೀರು ಸಂಗ್ರಹದಿಂದ ಸೊಳ್ಳೆಗಳು ಹೆಚ್ಚಾಗಿವೆ. ಇನ್ನೂ ಸೊಳ್ಳೆ ಕಡಿತದಿಂದ ರೋಗಗಳು ಆವರಿಸುವ ಹಿನ್ನೆಲೆಯಲ್ಲಿ ಮಕ್ಕಳು ಭಯ ಭೀತರಾಗಿದ್ದಾರೆ. ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಪಾಠ ಕೇಳುವಂತಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಕೆಸರಿನಲ್ಲಿ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಆಯ ತಪ್ಪಿದರೆ ಚರಂಡಿಯಲ್ಲಿ
ಬೀಳುವುದು ಗ್ಯಾರಂಟಿ. ಶಾಲೆಯ ಸುತ್ತ ಮುತ್ತ ಚರಂಡಿ ನೀರು ನಿಲ್ಲದಂತೆ ಕ್ರಮ ಕೈಗೊಳಬೇಕು ಎಂದು ಗ್ರಾಪಂಗೆ ಅನೇಕ ಬಾರಿ ನಿವಾಸಿಗಳು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಕ್ಕಳ ಪೋಷಕರು
ದೂರಿದ್ದಾರೆ.
Advertisement