Advertisement
ಟ್ಯಾಂಕರ್ ನೀರು ಪೂರೈಕೆಮಂಗಳೂರಿನ ಕೆಲವು ಶಾಲೆಗಳಲ್ಲಿ ಶಾಲಾರಂಭದ ದಿನವೇ ನೀರಿನ ಸಮಸ್ಯೆ ಎದುರಾಯಿತು. ಶಿಕ್ಷಕರು ಮಹಾನಗರ ಪಾಲಿಕೆಯವರಿಗೆ ತಿಳಿಸಿ ಟ್ಯಾಂಕರ್ ಮುಖಾಂತರ ನೀರು ತರಿಸಿದರು. ಕೋಡಿಕಲ್ ಹಿ.ಪ್ರಾ. ಶಾಲೆಯಲ್ಲಿ ‘ಶಾಲೆ ಕಡೆ ನನ್ನ ನಡೆ’ ವಿಶೇಷ ದಾಖಲಾತಿ ಆಂದೋಲನ ಜಿಲ್ಲಾ ಮಟ್ಟದಲ್ಲಿ ನಡೆಯಿತು. ಉಡುಪಿ ಜಿಲ್ಲೆಯಲ್ಲಿ ಶಿಕ್ಷಣಾಧಿಕಾರಿ ಸೂಚನೆಯ ಮೇರೆಗೆ ಶಾಲೆಯ ಆವರಣ, ಕೊಠಡಿ ಸ್ವತ್ಛಗೊಳಿಸಿ, ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ಇಡಲಾಗಿತ್ತು.
ನೀರಿನ ಸಮಸ್ಯೆಯಿಂದಾಗಿ ಹಲವು ಶಾಲೆಗಳು ಮಧ್ಯಾಹ್ನದ ವೇಳೆಗೆ ಮುಚ್ಚಿದವು. ಶಾಲೆಗಳಲ್ಲಿ ನೀರಿನ ಸಮಸ್ಯೆಯಿದೆ. ಜಿಲ್ಲಾಧಿಕಾರಿಗಳು ಸಮರ್ಪಕ ನೀರಿನ ಬಳಕೆಗೆ ಆದೇಶಿಸಿದ್ದಾರೆ ಎಂದು ಎಂದು ಡಿಡಿಪಿಐ ಶೇಷಶಯನ ಕೆ. ಅವರು ತಿಳಿಸಿದ್ದಾರೆ. ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ್ ಬಾಬು ಅವರು ಕೆಲವು ಶಾಲೆಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಮುಖ್ಯೋಪಾಧ್ಯಾಯರ ಜತೆಗೆ ಚರ್ಚೆ ನಡೆಸಿದರು. ಅಗತ್ಯತೆ ಅನುಗುಣವಾಗಿ ಶಾಲೆಗಳಿಗೆ ನೀರು ಪೂರೈಕೆ ಮಾಡುವಂತೆ ಡಿಡಿಪಿಐ ಅವರಿಗೆ ತಿಳಿಸಿದ್ದಾರೆ.