Advertisement

ಶಿಕ್ಷಕರಿಂದ ಮಕ್ಕಳಿಗೆ ಹೂವಿನ ಸುರಿಮಳೆ

02:48 PM Jan 02, 2021 | Team Udayavani |

ಕೊಪ್ಪಳ: 10 ತಿಂಗಳ ಬಳಿಕ ಸರ್ಕಾರವು ಹೊಸ ವರ್ಷದ ಮೊದಲ ದಿನವೇ ಶಾಲೆಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳಿಂದ ಉತ್ತಮಪ್ರತಿಕ್ರಿಯೆ ದೊರೆತಿದೆ. ಖುಷಿಯಿಂದಲೇವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರೆ,ಶಿಕ್ಷಕರು ಗುಲಾಬಿ ನೀಡಿ, ಹೂವಿನ ಸುರಿಮಳೆ ಗೈದು ಅವರನ್ನು ಸ್ವಾಗತಿಸಿದ್ದಾರೆ. ಕೋವಿಡ್ ಕುರಿತಂತೆ ಜಾಗೃತಿ ಕ್ರಮ ಕೈಗೊಂಡು ಶಾಲೆಗಳು ಗಮನ ಸೆಳೆದಿವೆ.

Advertisement

ಬರೋಬ್ಬರಿ 10 ತಿಂಗಳ ಬಳಿಕಶಾಲೆಗಳನ್ನು ಆರಂಭಿಸಿದ್ದರಿಂದ ಮೊದಲದಿನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೋಅಥವಾ ಕೋವಿಡ್‌ ಭಯದಲ್ಲಿಯೇ ಹಿಂದೆಸರಿಯುತ್ತಾರೋ ಎನ್ನುವ ಆತಂಕದಲ್ಲೇಶಾಲೆಗಳನ್ನು ಆರಂಭಿಸಿತ್ತು. ಆದರೆ ಶಿಕ್ಷಣ ಇಲಾಖೆಯ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಿದ್ದಾರೆ.

ಮೊದಲ ದಿನವೇ ಜಿಲ್ಲೆಯಲ್ಲಿನ ಪ್ರಾಥಮಿಕ 1372 ಮತ್ತು 310 ಪ್ರೌಢಶಾಲೆಗಳಲ್ಲಿ ಉತ್ತಮಸ್ಪಂದನೆ ದೊರೆತಿದೆ. ಎಲ್ಲ ತರಗತಿ ಮಕ್ಕಳೂಶಾಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಸ್ವಾಗತಿಸಿ, ಕಿರಿಯ ಶಾಲೆ ಮಕ್ಕಳಿಗೆ ಹೋಂ ವರ್ಕ್‌ ಹಾಕಿವಾಪಾಸ್‌ ಮನೆಗೆ ಕಳುಹಿಸುತ್ತಿರುವುದು ಕಂಡು ಬಂದಿತು.

ಶಾಲೆಗಳಿಗೆ ಸ್ಯಾನಿಟೈಜರ್‌ ಸಿಂಪರಣೆ:

ರಾಜ್ಯ ಸರ್ಕಾರವು ಕೋವಿಡ್‌ ಹಿನ್ನೆಲೆಯಲ್ಲಿ ವಿವಿಧ ಮುಂಜಾಗೃತಾ ಕ್ರಮ ಕೈಗೊಂಡಿದ್ದು,ಹೊಸ ವರ್ಷದ ಸಂಭ್ರಮದಲ್ಲಿಯೇ ಶಾಲೆಆರಂಭಿಸಿದೆ. ಜೊತೆಗೆ ವಿದ್ಯಾರ್ಥಿಗಳಿಗೆಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಮೊದಲು ಶಾಲೆಗಳಿಗೆ ಗ್ರಾಪಂ ಸಹಕಾರದಲ್ಲಿ ಸ್ಯಾನಿಟೈಜರ್‌ ಸಿಂಪರಣೆ ಮಾಡಿಸಿದೆ.ವಿದ್ಯಾರ್ಥಿಗಳಿಗೆ ಮಾಸ್ಕ್ ಕುರಿತಂತೆ ಜಾಗೃತಿಮೂಡಿಸಲು ಶಿಕ್ಷಕ ವರ್ಗಕ್ಕೆ ಸೂಚಿಸಿದ್ದರಿಂದಶಿಕ್ಷಕರು ಮೊದಲ ದಿನ ಶಾಲೆಗೆ ಆಗಮಿಸಿದವಿದ್ಯಾರ್ಥಿಗಳಿಗೆ ಸಮಾಜಿಕ ಅಂತರದಕುರಿತು ಜಾಗೃತಿ ಮೂಡಿಸಿದರು.

Advertisement

ಶಾಲೆಗಳಿಗೆ ತಳಿರು ತೋರಣದ ಸಿಂಗಾರ: ಸರ್ಕಾರವು ಹೊಸ ವರ್ಷದ ದಿನದಂದೇಶಾಲೆಗಳನ್ನು ಆರಂಭಿಸಿದ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿ ಹಲವು ಸರ್ಕಾರಿ ಶಾಲೆಗಳಲ್ಲಿವಿದ್ಯಾಗಮದಡಿ ವಿದ್ಯಾರ್ಥಿಗಳನ್ನುಸ್ವಾಗತಿಸಲು ಶಾಲೆಯ ಎಲ್ಲ ಕೊಠಡಿಗಳನ್ನುಶುಚಿಗೊಳಿಸಿ ತಳಿರು ತೋರಣಗಳನ್ನುಶಾಲೆಯ ಗೋಡೆ, ಕಂಬಗಳಿಗೆ ಕಟ್ಟಿಭರ್ಜರಿಯಾಗಿ ಸಿಂಗಾರ ಮಾಡಿದ್ದರು.ಇದಲ್ಲದೇ ಶಾಲೆ ಮುಂಭಾಗದಲ್ಲಿ ರಂಗೋಲಿಬಿಡಿಸಿ ವಿದ್ಯಾರ್ಥಿಗಳಿಗೆ ಸ್ವಾಗತಕ್ಕೆ ಸರ್ವಸಿದ್ಧತೆ ಮಾಡಿ ಶಿಕ್ಷಕರೇ ಸಾಲಾಗಿ ನಿಂತುವಿದ್ಯಾರ್ಥಿಗಳನ್ನು ಸ್ವಾಗತ ಕೋರಿದ್ದು ಗಮನ ಸೆಳೆಯಿತು.

ಮಕ್ಕಳಿಗೆ ಶಿಕ್ಷಕರಿಂದ ಹೂವಿನ ಸುರಿಮಳೆ:

10 ತಿಂಗಳ ಬಳಿಕ ಶಾಲೆಗೆ ವಿದ್ಯಾರ್ಥಿಗಳನ್ನುಸ್ವಾಗತಿಸಲು ಶಿಕ್ಷಕರು ಹೂವಿನ ಸುರಿಮಳೆಗರಿಯುವ ಮೂಲಕ ತಮ್ಮ ಶಿಷ್ಯವರ್ಗಕ್ಕೆಸ್ವಾಗತ ಕೋರಿದರು. ವಿದ್ಯಾರ್ಥಿಗಳುಖುಷಿಯಿಂದಲೇ ಶಿಕ್ಷಕರು ಹಾಕುವ ಹೂವಿನಸುರಿಮಳೆಯಲ್ಲಿಯೇ ಸಂತಸ ಕಾಣುತ್ತಾ, ಅವರಿಗೆ ಕೈ ಮುಗಿಯುತ್ತ ಶಾಲೆಯ ಆವರಣಪ್ರವೇಶ ಮಾಡಿದರು. ಇನ್ನೂ ಭಾಗ್ಯನಗರದಲ್ಲಿವಿದ್ಯಾರ್ಥಿಗಳಿಗೆ ಸಂಸದ ಸಂಗಣ್ಣ ಕರಡಿಸೇರಿ ಶಿಕ್ಷಕರು ಗುಲಾಬಿ ಹೂ ಕೊಟ್ಟು ಸ್ವಾಗತ ಕೋರಿದರು.

ಮಕ್ಕಳಿಗೆ ಮಾಸ್ಕ್ ಕೊಡದ ಸರ್ಕಾರ: ಸರ್ಕಾರ ಶಾಲೆ ಆರಂಭಿಸಿ ವಿದ್ಯಾರ್ಥಿಗಳ ಬಗ್ಗೆ ಮುನ್ನೆಚ್ಚರಿಕೆ ತಗೆದುಕೊಂಡಿದೆಯಷ್ಟೆ. ಆದರೆ ಅವರಿಗೆ ಮಾಸ್ಕ್ ಕೊಡಲಾರಷ್ಟು ಆರ್ಥಿಕವಾಗಿ

ಸಂಕಷ್ಟ ಎದುರಿಸುತ್ತಿದೆಯೇ ಎಂದು ಪಾಲಕ ವರ್ಗ, ಶಿಕ್ಷಣ ತಜ್ಞರು ಹಾಗೂ ಪ್ರಜ್ಞಾವಂತರುಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿವಿದ್ಯಾರ್ಥಿಗೆ ಹತ್ತಿಬಟ್ಟೆ ಮಾದರಿಯ ಮಾಸ್ಕ್ ಖರೀದಿಸಿ ಕೊಡಿಸಿದ್ದರೆ ಸರ್ಕಾರಕ್ಕೆಹೊರೆಯಾಗುತ್ತಿರಲಿಲ್ಲ ಎಂದಿದೆಯಲ್ಲದೇ,ಪ್ರತಿ ವಾರವೂ ವಿದ್ಯಾರ್ಥಿಗಳ ಆರೋಗ್ಯದತಪಾಸಣೆಯಾಗಬೇಕು. ಕನಿಷ್ಟ ನಾಲ್ಕೆ çದುತಿಂಗಳು ಈ ಪ್ರಕ್ರಿಯೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

ಶಾಲೆ ಆರಂಭವಾದ ಮೊದಲ ದಿನವೇ ಉತ್ತಮಸ್ಪಂದನೆ ದೊರೆತಿವೆ. 100ಕ್ಕೆ 60ವಿದ್ಯಾರ್ಥಿಗಳು ಇಂದೇ ಶಾಲೆಗೆಆಗಮಿಸಿದ್ದಾರೆ. ಅವರಿಗೆ ಕೋವಿಡ್ ಜಾಗೃತಿ ಕುರಿತು ತಿಳಿವಳಿಕೆಹೇಳಿದ್ದೇವೆ. ಸ್ಯಾನಿಟೈಸರ್‌ ಸೇರಿ ಎಲ್ಲ ವಿದ್ಯಾರ್ಥಿಗಳಿಗೆ ನಾವೇ ಮಾಸ್ಕ್ ವ್ಯವಸ್ಥೆ ಮಾಡಿದ್ದೇವೆ. ಮಕ್ಕಳಆರೋಗ್ಯದ ಬಗೆಗಿನ ಕಾಳಜಿಯೂ ನಮಗೆ ತುಂಬ ಇದೆ.  –ಮಲ್ಲಪ್ಪ ಗುಡದಣ್ಣವರ,  ಹಿರೇಸಿಂದೋಗಿ ಪಬ್ಲಿಕ್‌ ಸ್ಕೂಲ್‌ ಮುಖ್ಯಾಧ್ಯಾಪಕ

10 ತಿಂಗಳ ಬಳಿಕ ನಮ್ಮ ಶಾಲೆ ಆರಂಭವಾಗಿದ್ದು ನಮಗೆ ತುಂಬ ಖುಷಿ ಆಗಿದೆ. ಶಿಕ್ಷಕರು ಇವತ್ತು ನಮಗೆ ಶಾಲೆಯಲ್ಲಿ ಲೆಕ್ಕ ಹೇಳಿಕೊಟ್ಟರು. ಶಾಲೆಗೆ ಬರುವಾಗ ನಮಗೆ ಸ್ವಾಗತ ಮಾಡಿದರು. ಕೋವಿಡ್ ಇದ್ದಿದ್ದರಿಂದ ಶಾಲೆ ರಜೆ ಇದ್ವು, ಆವಾಗ ನಾವು ಆಟಆಡಿದ್ವಿ. ಈಗ ಖುಷಿಯಿಂದ ಶಾಲೆಗೆಬಂದೇವಿ. ಬಾಳ್‌ ದಿನದ ಬಳಿಕಶಾಲಿ ಆರಂಭವಾಗಿದ್ದು ಖುಷಿ ಆಗೈತಿ.  –ಪ್ರವೀಣ ಗದ್ದಿ, 7ನೇ ತರಗತಿ ವಿದ್ಯಾರ್ಥಿ

ಸರ್ಕಾರ ವಿದ್ಯಾರ್ಥಿಗಳಹಿತದೃಷ್ಟಿಯಿಂದ ಶಾಲೆಆರಂಭಿಸಿದೆ. ಆದರೆ ನಮ್ಮಲ್ಲಿ ಇನ್ನೂ ಕೋವಿಡ್ ಆತಂಕ ಕಾಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಭಯವನ್ನು ದೂರಮಾಡಬೇಕಿದೆ.ಆದರೆ ಸರ್ಕಾರವು ಎಲ್ಲ ಮಕ್ಕಳಿಗೆಪ್ರತಿ ತಿಂಗಳು ಮಾಸ್ಕ್ ಕೊಡಬೇಕು. ಅವರ ಆರೋಗ್ಯವನ್ನು ತಿಂಗಳಲ್ಲಿ 2-3 ಬಾರಿ ಪರೀಕ್ಷೆ ಮಾಡಬೇಕು. ಇದರಿಂದ ನಮಗೂ ಆತಂಕದೂರವಾಗಲಿದೆ. – ಬಂದೆಸಾಬ ಕವಲೂರು, ವಿದ್ಯಾರ್ಥಿ ಪಾಲಕ

 

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next