Advertisement
ತಾಲೂಕಿನ ನಾಗಾಪುರ ಗಿರಿಜನ ಆಶ್ರಮಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಗ್ರಾಮಸಭೆಯನ್ನು ಮಕ್ಕಳಿಂದಲೇ ಉದ್ಘಾಟಿಸಿ ಮಾತನಾಡಿ, ಇಂದು ಯಾವುದೇ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಚಕಾರವೆತ್ತದಿದ್ದರಿಂದಾಗಿ ಆದಿವಾಸಿಗಳ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದರು.
ಶಾಲೆಗಳಲ್ಲಿನ ಚಟುವಟಿಗೆಗಳ ಬಗ್ಗೆ ನಿಗಾವಹಿಸಬೇಕು, ಶಾಲೆಗಳಲ್ಲಿ ರಚಿತ ವಾಗಿರುವ ಎಸ್.ಡಿ.ಎಂ.ಸಿ.ಗೆ ಮುಖ್ಯ
ಶಿಕ್ಷರನ್ನು ಪ್ರಶ್ನಿಸುವ ಅಧಿಕಾರ ನೀಡಿದ್ದರೂ ಸಹ ಆ ಸಮಿತಿಗೆ ಯಾವುದೇ ಮಾಹಿತಿ ನೀಡದಿರುವುದು ನಮ್ಮ ವ್ಯವಸ್ಥೆಯ
ಧ್ಯೂತಕವೆಂದ ಅವರು, ಸಂಬಂಧಿಸಿದ ಬಿಇಒ ಈ ಬಗ್ಗೆ ಜಾಗೃತರಾಗಿರಬೇಕು, ಎಲ್ಲ ಎಸ್.ಡಿ.ಎಂ.ಸಿ. ಸಮಿತಿ ಹಾಗೂ
ಗ್ರಾಮ ಪಂಚಾಯ್ತಿ ಸದಸ್ಯರ, ಎಲ್ಲ ಶಿಕ್ಷಕರ ಪ್ರತ್ಯೇಕ ಸಭೆ ನಡೆಸಿ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು, ಭೋದನಾ ಮಟ್ಟವನ್ನು ಮೌಲ್ಯ ಮಾಪನ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶಕ ರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಸಭೆಯಲ್ಲಿ ನಿಧನರಾದ ಕೇಂದ್ರ ಸಚಿವ ದಿ.ಅನಂತಕುಮಾರ್‌ರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರು ಅದಮ್ಯ ಚೇತನ ಟ್ರಸ್ಟ ವತಿಯಿಂದ ಬಡ ಮಕ್ಕಳ ಊಟ- ಶಿಕ್ಷಣಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದು, 50 ಶಾಲೆಯಲ್ಲಿ ಆರಂಭಿಸಿದ ಯೋಜನೆ ಯಿಂದ ಒಂದು ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಅವರ ಹೆಸರಿನಲ್ಲಿ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು ಎಂದರು.
Related Articles
Advertisement
ತಾ.ಪಂ.ಸದಸ್ಯೆ ಪುಷ್ಪಲತಾ ಮಾತನಾಡಿ, ಹಾಡಿಗಳಲ್ಲಿ ಕೂಲಿಗೆ ತೆರಳುವವರೊಂದಿಗೆ ಮಕ್ಕಳನ್ನು ಕರೆದೊಯ್ಯು ವುದರಿಂದಾಗಿ ಕಲಿಕೆಯಲ್ಲಿ ಹಿಂದುಳಿದಿದ್ದಾರೆ, ಈ ಬಗ್ಗೆಯೂ ಕ್ರಮವಾಗ ಬೇಕೆಂದರೆ, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ ಮಹೇಶ್ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನುರಿತ ಶಿಕ್ಷಕರಿದ್ದಾರೆ, ಆದರೆ ಹಾಡಿಗಳಲ್ಲಿ ಮಕ್ಕಳನ್ನು ಮನೆಯಿಂದ ಕರೆತಂದು ಪಾಠ ಮಾಡುವ ಸ್ಥಿತಿ ಇದೆ, ಮತ್ತೂಂದೆಡೆ ಊಟದ ನಂತರ ಮನೆ ಯತ್ತ ಮುಖಮಾಡುತ್ತಾರೆ. ಆಶ್ರಮ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಬೇರೆ ಊರುಗಳಿಂದ ಬಂದು ಪಾಠ ಮಾಡುತ್ತಿದ್ದಾರೆ, ಆ ಶಿಕ್ಷಕರಿಗೆ ಸಂಬಳ, ಸವಲತ್ತು ಒದಗಿಸಿದಲ್ಲಿ, ಆದಿವಾಸಿ ಮಕ್ಕಳಿಗೂ ಪಾಠ ಮಾಡಲು ಮನಸ್ಸು ಮಾಡುತ್ತಾರೆ ಎಂದರು.
ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಳದ ಅಧ್ಯಕ್ಷ ಕೃಷ್ಣಯ್ಯ, ಜಿಪಂ ಸದಸ್ಯ ಕಟ್ಟನಾಯಕ, ಗ್ರಾಪಂ ಅಧ್ಯಕ್ಷೆ ಮಹದೇವಿ ಇತರರು ಇದ್ದರು.