Advertisement

ಶಾಲೆಗಳನ್ನು ತೆರೆಯುವ ಮೊದಲು ಮಕ್ಕಳಿಗೆ ನೀಡುವ ಲಸಿಕೆಗಳ ಲಭ್ಯತೆ ಮುಖ್ಯ : ಗುಲೇರಿಯಾ

07:44 PM Jun 27, 2021 | Team Udayavani |

ನವ ದೆಹಲಿ : ಮಕ್ಕಳಿಗೆ ನೀಡುವ ಲಸಿಕೆಗಳನ್ನು ಲಭ್ಯವಾಗುವಂತೆ  ಮಾಡುವುದರಿಂದ ಶಾಲೆಗಳನ್ನು ಪುನರಾರಂಭ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಏಮ್ಸ್ ನ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

Advertisement

ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐನೊಂದಿಗೆ ಮಾತನಾಡಿದ ಗುಲೇರಿಯಾ, ಎರಡರಿಂದ 18 ವರ್ಷದೊಳಗಿನವರಿಗೆ ನೀಡುವ  ಭಾರತ್ ಬಯೋಟೆಕ್‌ ನ ಕೊವಾಕ್ಸಿನ್‌ ಲಸಿಕೆಯ ಎರಡನೇ ಮತ್ತು ಮೂರು ಹಂತದ ಪ್ರಾಯೋಗಿಕ ಡೇಟಾವನ್ನು ಸೆಪ್ಟೆಂಬರ್ ವೇಳೆಗೆ ನಿರೀಕ್ಷಿಸಬಹುದು ಎಂದಿದ್ದಾರೆ.

ಶಾಲೆಗಳು ಮತ್ತೆ ಪುನರಾಂಭವಾಗಲೇಬೇಕಿದೆ.  ಲಸಿಕೆಗಳು ಈ ವಿಚಾರವಾಗಿ ಬಹಳ ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಶಾಲೆಗಳನ್ನು ತೆರೆಯುವ ಮೊದಲು ಮಕ್ಕಳಿಗೆ ನೀಡುವ ಲಸಿಕೆಗಳ ಲಭ್ಯತೆ ಮುಖ್ಯ. ಕಳೆದ  ಒಂದುವರೆ ವರ್ಷಗಳಿಂದ ಶಾಲೆಗಳು ಮುಚ್ಚಿವೆ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯುಂಟು ಮಾಡಬಾರದು ಸರ್ಕಾರ ಶಾಲೆ ಹಾಗೂ ಮಕ್ಕಳ ವಿಚಾರವಾಗಿ ಹೆಚ್ಚು ಗಮನ ನೀಡಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :  ಕೋವಿಡ್; ರಾಜ್ಯದಲ್ಲಿಂದು 7699 ಸೋಂಕಿತರು ಗುಣಮುಖ, 3604 ಹೊಸ ಪ್ರಕರಣ ಪತ್ತೆ 

ಮಕ್ಕಳಿಗೆ ನೀಡುವ ಲಸಿಕೆಗಳಿಗೆ ಶೀಘ್ರದಲ್ಲಿ ಔಷಧ ನಿಯಂತ್ರಕರು ಅನುಮೋದಿಸಬೇಕು. ಒಂದು ವೇಳೆ ಫೈಜರ್ ಲಸಿಕೆ ಅನುಮತಿಯನ್ನು ಪಡೆದರೇ, ಅದನ್ನು ಮಕ್ಕಳಿಗೂ ನೀಡಲು ಸಾಧ್ಯವಿದೆ. ಲಸಿಕೆಯೊಂದೇ ಸಾಂಕ್ರಾಮಿಕ ರೋಗದಿಂದ ಮುಕ್ತಿ ಹೊಂದಲು ಇರುವ ಮಾರ್ಗ ಎಂದಿದ್ದಾರೆ.

Advertisement

ಜೈಡುಸ್ ಕ್ಯಾಡಿಲ್ಲಾ ಕೂಡ ತುರ್ತು ಪರಿಸ್ಥಿತಿಯಲ್ಲಿ ಜಾಗತಿಕವಾಗಿ ಲಸಿಕೆಯನ್ನು ನೀಡಲು ಅನುಮತಿಸುವಂತೆ ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಆ ಲಸಿಕೆ ಅನುಮತಿಯನ್ನು ಪಡೆದರೇ ಮಕ್ಕಳಿಗೂ ಸೇರಿ ವಯಸ್ಕರಿಗೂ ನೀಡಬಹುದಾಗಿದೆ.

ಇನ್ನು, ಕೋವಿಡ್ 19 ಸೋಂಕು ಈವರೆಗೆ ಯಾವುದೇ ರೀತಿಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲವಾದರೂ, ವೈರಸ್‌ ನಲ್ಲಿನ ಹರಡುವಿಕೆ ಹಾಗೂ ರೂಪಾಂತರಿಗಳ ಲಕ್ಷಣಗಳು ಬದಲಾದರೇ ಅದು ಸೋಂಕಿನ ಪ್ರಮಾಣಗಳು ಹೆಚ್ಚಾಗುವ ಸಾಧ್ಯತೆಯಿದೆ ಅಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರ ಇತ್ತೀಚೆಗಷ್ಟೇ ಹೇಳಿದೆ.

ಇದನ್ನೂ ಓದಿ :  ಆನೆಗುಂದಿಯಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಆನಂದಯ್ಯನ ನಾಟಿ ಔಷಧ ವಿತರಣೆ

Advertisement

Udayavani is now on Telegram. Click here to join our channel and stay updated with the latest news.

Next