Advertisement

ತರಾತುರಿಯಲ್ಲಿ ಶಾಲೆಗಳನ್ನು ಆರಂಭ ಮಾಡುವುದಿಲ್ಲ: ಸಚಿವ ಸುರೇಶ್ ಕುಮಾರ್

01:22 PM Jun 04, 2020 | sudhir |

ಬೆಂಗಳೂರು : ರಾಜ್ಯದಲ್ಲಿ ಶಾಲೆ ಪುನರ್ ಆರಂಭ ಮಾಡುವ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಮಕ್ಕಳ ಸುರಕ್ಷತೆ, ಕಲಿಕೆ ಹಾಗೂ ಭವಿಷ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಜಾಸತ್ತಾತ್ಮಕವಾಗಿ ಮುಂದೆ ಸಾಗಲಿದ್ದೇವೆ. ತರಾತುರಿಯಲ್ಲಿ
ನಿರ್ಧಾರ ಮಾಡಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

Advertisement

ಶಾಲಾರಾಂಭದ ಗೊಂದಲಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ ಲೈವ್ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸದ್ಯ ಆರಂಭ ಮಾಡಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೋವಿಡ್ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ವರೆಗೂ ಶಾಲೆ ಆರಂಭಿಸಬಾರದು ಎಂಬ ಆಗ್ರಹವೂ ಕೇಳಿ ಬರುತ್ತದೆ. ಇದರ ಜತೆಗೆ ಕೋವಿಡ್ ಪರಿಸ್ಥಿತಿ ಹೀಗೆ ದೀರ್ಘವಧಿಯವರೆಗೂ ಇರಲಿದೆ. ಆದ್ದರಿಂದ ಸಾಮಾಜಿಕ ಅಂತರ, ಮಾಸ್ಕ್ ಮೊದಲಾದ ಸುರಕ್ಷತಾ ಕ್ರಮದೊಂದಿಗೆ ಶಾಲೆ ಆರಂಭಿಸಬೇಕು ಎಂಬ ಮನವಿಯೂ ಬಂದಿದೆ. ಹೀಗಾಗಿ ಎಲ್ಲ ಅಂಶಗಳನ್ನು ಪರಿಶೀಲಿಸಿ, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಯಾವುದೇ ರೀತಿಯ ಆತುರ ಅಥವಾ ತರಾತುರಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಜುಲೈ 1 ಅಥವಾ ಜುಲೈ15 ಶಾಲಾರಂಭದ ದಿನಾಂಕವಲ್ಲ. ಉದ್ದೇಶಿತ ದಿನಾಂಕವಷ್ಟೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಗಳಲ್ಲಿ ಪಾಲಕ, ಪೋಷಕರ ಮತ್ತು ಎಸ್ ಡಿಎಂಸಿ ಸದಸ್ಯರ ಹಾಗೂ ಪಾಲುದಾರರ ಸಭೆ ನಡೆಸಿ, ಅಲ್ಲಿ ಬರುವ ನಿರ್ಧಾರದ ಆಧಾರದಲ್ಲಿ ಮುಂದೆ ಸಾಗಲಿದ್ದೇವೆ. ಶಾಲಾರಂಭದ ಯಾವ ನಿರ್ಧಾರವೂ ಈವರೆಗೂ ತೆಗೆದುಕೊಂಡಿಲ್ಲ. ಹೀಗಾಗಿ ಪಾಲಕ, ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next