Advertisement

ಶಿಕ್ಷಕರಾಗಿ ಗಮನ ಸೆಳೆದ ಸಚಿವ ಪ್ರಭು ಚವ್ಹಾಣ

05:37 PM Aug 24, 2021 | Team Udayavani |

ಔರಾದ: ನಿತ್ಯ ಸಾರ್ವಜನಿಕರ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ಸಚಿವ ಪ್ರಭು ಚವ್ಹಾಣ ಸೋಮವಾರ ಶಾಲಾ
ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಗಮನ ಸೆಳೆದರು.

Advertisement

ಔರಾದ ತಾಲೂಕು ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರೌಢಶಾಲೆ ಹಾಗೂ ಆದರ್ಶ ಮಾದರಿ ಶಾಲೆಗಳಿಗೆ ಪಶು ಸಂಗೋಪನೆ ಹಾಗೂ ಬೀದರ
ಜಿಲ್ಲಾ ಉಸ್ತುವಾರಿ ಸಚಿವರೂ ಆದ ಚವ್ಹಾಣ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ತರಗತಿಗೆ ತೆರಳಿ ಸಮಾಜ ವಿಜ್ಞಾನ ವಿಷಯದ ಬಗ್ಗೆ ಕೇಳಿದರು. ಕೋವಿಡ್‌ ನಿಯಮ ಕಡ್ಡಾಯವಾಗಿ ಪಾಲಿಸುವ ಜೊತೆಗೆ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದರು.

ಇದನ್ನೂ ಓದಿ:ಅಪ‍್ಗಾನಿಸ್ತಾನದಲ್ಲಿ ಸಂಕಷ್ಟದಲ್ಲಿರುವವರ ಸ್ಥಳಾಂತರಕ್ಕೆ ಒತ್ತು : ಹ್ಯಾರೀಸ್

ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಓಣಿಯಲ್ಲಿ ಸ್ನೇಹಿತರಿಗೆ ಕಡ್ಡಾಯವಾಗಿ ಶಾಲೆಗೆ ಬರುವಂತೆ ಸಲಹೆ ನೀಡಿ, ಉತ್ತಮ ಶಿಕ್ಷಣ ನೀಡಲು ಶಿಕ್ಷಣ
ಇಲಾಖೆ ಸಿದ್ಧವಾಗಿದೆ. ಇಡೀ ವಿಶ್ವವನ್ನೇ ಕಾಡಿದ ಕೋವಿಡ್‌ದಿಂದ ಭೀತರಾಗದೇ ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಹೋರಾಡಬೇಕಿದೆ ಎಂದರು.

ವಿದ್ಯಾರ್ಥಿಗಳು ಹಾಗೂ ಪಾಲಕರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆದುಕೊಳ್ಳವಂತೆ ಮನೆಯಲ್ಲಿ ತಿಳಿಸಿ. ಕುಟುಂಬದ ಸದಸ್ಯರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಎಂದು ಧೈರ್ಯ ತುಂಬಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next