Advertisement
ಶಾಲೆಯನ್ನು ಆರಂಭಿಸುವ ಸಲುವಾಗಿ ಸಕಲ ಸಿದ್ಧತೆ ಕೈಗೊಂಡಿದ್ದು, ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಿ ಪ್ರವೇಶದ ಬಳಿ ಗೇಟಿಗೆ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಹಿಂದೆ ಸರ್ಕಾರ ಶಾಲೆಗಳನ್ನು ಆರಂಭಿಸಲು ಮುಂದಾಗುತ್ತಿದ್ದಂತೆ ಅತಂಕಕ್ಕೆ ಒಳಗಾಗುತ್ತಿದ್ದ ಪೋಷ ಕರು ಈ ಬಾರಿ ತಾವೇ ಖುದ್ದಾಗಿ ಮಕ್ಕಳನ್ನು ಶಾಲೆಗಳಿಗೆ ಕರೆತಂದರು. ಇದರಿಂದ ಮೊದಲನೆ ದಿನವೇ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಶಿಕ್ಷಕರೊಂದಿಗೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಸೇರಿ ಮಕ್ಕಳನ್ನು ಸ್ವಾಗತಿಸಿದರು. ಪರಸ್ಪರ ಹೊಸವರ್ಷದಶುಭಾಶಯ ವಿನಿಮಯ ಮಾಡಿಕೊಂಡರು. ಪಾಲಕರ ಅನುಮತಿ ಪತ್ರದೊಂದಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪ್ರವೇಶದಲ್ಲಿಯೇ ತಾಪಮಾನ ಪರೀಕ್ಷೆಗೊಳಪಡಿಸಿ ಕೈಗಳಿಗೂ ಸ್ಯಾನಿಟೈಸರ್ ಸಿಂಪಡಿಸಿ, ತರಗತಿಗಳಲ್ಲಿ ನಿಗದಿತ ಅಂತರದಲ್ಲಿ ಕುಳ್ಳರಿಸಲಾಗಿತ್ತು. ಸರಸ್ವತಿ ಪೂಜೆ ನೆರ ವೇರಿಸಿ ತರಗತಿಗಳನ್ನು ಆರಂಭಿಸಿದರು. ಕಳೆದ ಒಂಭತ್ತು ತಿಂಗಳಿಂದ ಶಾಲೆಯ ಮುಖನೋಡದ ಮಕ್ಕಳು ತಮ್ಮ ಸಹಪಾಠಿಗಳನ್ನು ಕಂಡು ಖುಷಿಪಟ್ಟರು.
Related Articles
Advertisement
ಪಟ್ಟಣದ ಸರ್ಕಾರಿ ಎಸ್‌ವಿಕೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಮೊದಲ ದಿನವೇ ಶಾಲೆಯಲ್ಲಿ ಕೊರೊನಾದ ಬಗ್ಗೆ ಪ್ರಬಂಧ ಬರೆಯಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಶಿಕ್ಷಕರ ಪ್ರಯತ್ನಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ದ್ವಿತೀಯ ಪಿಯುಸಿ ಕಾಲೇಜುಗಳಲ್ಲೂ ಕೋವಿಡ್ ಕುರಿತು ಪ್ರಬಂಧ ಬರೆಯಿಸುವುದರಿಂದ ಎಲ್ಲ ವಿದ್ಯಾರ್ಥಿಗಳಲ್ಲಿ ಕೊರೊನಾ ಭಯ ಹೋಗಲಾಡಿಸಬಹುದು. ವಿದ್ಯಾರ್ಥಿಗಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಕೋವಿಡ್ ಎಂದು ಹೆದರಬಾರದು ಎಂದು ಸಲಹೆ ನೀಡಿದರು.
2ನೇ ಹಂತದ ಕೋವಿಡ್ ಹರಡುತ್ತಿದೆ ಎಂದು ಪ್ರಚಾರವಾಗಿದ್ದು, ಇದಕ್ಕೆ ಹೆದರಬಾರದು. ಇದರಿಂದ ಯಾರಿಗೂ ಯಾವುದೇ ಅಪಾಯ ಆಗುವುದಿಲ್ಲ. ಧೈರ್ಯವಾಗಿ ಇರಬೇಕು ಎಂದು ಶಾಸಕರು, ಸರ್ಕಾರ ನೀಡಿರುವ ಎಲ್ಲಾ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶಿಕ್ಷಕ ವೃಂದಕ್ಕೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಕವಿತಾ, ನಗರಸಭಾ ಸದಸ್ಯ ನಾಸೀರ್ ಷರೀಫ್, ಬಿಇಒ ಚಂದ್ರಪಾಟೀಲ್, ಬಿಆರ್‌ಸಿ ಮಂಜುಳಾ, ಉಪ ಪ್ರಾಂಶುಪಾಲ ಮಹದೇವ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು