Advertisement
ತಳಿರು – ತೋರಣಈ ವೇಳೆ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಮಕ್ಕಳನ್ನು ಬ್ಯಾಂಡ್ ವಾದ್ಯಗಳ ನಿನಾದದ ಮೂಲಕ ಶಾಲೆ ತನಕ ಮೆರವಣಿಗೆಯಲ್ಲಿ ಕರೆ ತಂದು ಸ್ವಾಗತಿಸಿ ಸಂಭ್ರಮಿಸಲಾಗುತ್ತದೆ. ಅಲ್ಲಿ ಮಕ್ಕಳಿಗೆ ಸಿಹಿತಿಂಡಿ ಹಂಚಿ ಖುಷಿ ಪಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ಸಿಹಿಯೊಂದಿಗೆ ಬಿಸಿಯೂಟ ಮತ್ತಷ್ಟು ಖುಷಿ ನೀಡಲಿದೆ. ಪ್ರಾರಂಭೊತ್ಸವದ ಈ ಸಂಭ್ರಮದಲ್ಲಿ ಮಕ್ಕಳ ಹೆತ್ತವರು, ಶಾಲಾ ಶಿಕ್ಷಕರು ಪಾಲುದಾರರಾಗಿ, ಮಕ್ಕಳ ಈ ಹಬ್ಬದ ರಂಗು ಹೆಚ್ಚಿಸಲಿದ್ದಾರೆ.
ವರ್ಷವಿಡಿ ಇನ್ನು ಪಾಟಿ ಚೀಲ ಹೊತ್ತು ಶಾಲೆಗೆ ತೆರಳಬೇಕು. ತರಗತಿ ಕೊಠಡಿ ಒಳಗೆ ಕುಳಿತು ಓದು- ಪಾಠ- ಅಭ್ಯಾಸದಲ್ಲಿ ತೊಡಗಬೇಕು. ಅದಕ್ಕೆಂದೆ ಮುಂದಿನ ಶ್ಯಕ್ಷಣಿಕ ವರ್ಷಕ್ಕೆ ಬೇಕಿರುವ ಸಾಮಾಗ್ರಿಗಳ ಕುರಿತು ಹೆತ್ತವರು ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿನ ಚಟುವಟಿಕೆಗಳ ಕುರಿತು ಮಕ್ಕಳಿಗೆ ತಿಳಿಹೇಳಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ವಿತರಣೆಗೆ ಇರುವ ಶೇ. 90ರಷ್ಟು ಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಪ್ರಾರಂಭೋತ್ಸವದ ದಿನ ಮಕ್ಕಳಿಗೆ ಅವುಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಶೂ ಹಾಗೂ ಸಮವಸ್ತ್ರಗಳು ಇನ್ನು ಬರಬೇಕಾಷ್ಟೆ.
Related Articles
Advertisement
ಜನಪ್ರತಿನಿಧಿಗಳಿಲ್ಲರಾಜ್ಯದಲ್ಲಿ ನೀತಿ ಸಂಹಿತೆ ಇರುವುದರಿಂದ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸದಂತೆ ಶಿಕ್ಷಣ ಇಲಾಖೆ ಎಲ್ಲ ಸರಕಾರಿ ಶಾಲೆಗಳಿಗೆ ಸೂಚನೆ ನೀಡಿದೆ. ಹೀಗಾಗಿ ಜನಪ್ರತಿನಿಧಿಗಳು ಶಾಲಾ ಪ್ರಾರಂಬೋತ್ಸವದಲ್ಲಿ ಪಾಲ್ಗೊಳ್ಳುವಂತಿಲ್ಲ. ಖುಷಿ ಮತ್ತು ಬೇಸರ
ಇಷ್ಟು ದಿನ ರಜೆಯನ್ನು ಮನೆಯಲ್ಲಿ, ಅಜ್ಜಿಮನೆಯಲ್ಲಿ ಆಟವಾಡುತ್ತ ಕಳೆದೆ. ಇವತ್ತಿಂದ ಶಾಲೆಗೆ ತೆರಳಬೇಕು. ಶಾಲೆಗೆ ಹೋಗಲು ಖುಷಿ ಆಗುತ್ತದೆ. ಇಷ್ಟು ದಿನ ಖುಷಿಯಾಗಿ ಇದ್ದು ಹೋಗಬೇಕಲ್ಲ ಅಂತ ಬೇಸರ ಆಗುತ್ತದೆ.
– ಪೂಜಾ ಬಿ., 2ನೇ ತರಗತಿ. ಸ.ಕಿ.ಪ್ರಾ. ಶಾಲೆ, ಮರ್ಕಂಜ ಪ್ರಾರಂಭದ ದಿನ ಭಾಗವಹಿಸುತ್ತೇವೆ
ಶೈಕ್ಷಣಿಕ ವರ್ಷಾರಂಭದ ಹೊತ್ತಿಗೆ ಶಾಲೆಗಳಿಂದ ಪುಸ್ತಕ ಇತ್ಯಾದಿ ಸಾಮಗ್ರಿಗಳು ದೊರೆತರೂ ಕೆಲವನ್ನು ಹೆತ್ತವರಾದ ನಾವೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿ ಕೆಲವನ್ನು ಖರೀದಿಸಿ ಸಂಗ್ರಹಿಸಿದ್ದೇವೆ. ಶಾಲಾ ಪ್ರಾರಂಭದ ದಿನ ಮಕ್ಕಳ ಜತೆ ಶಾಲೆಗೆ ತೆರಳಿ ಭಾಗವಹಿಸುತ್ತೇನೆ.
– ಚಿತ್ರಾವತಿ ಶಿವಕುಮಾರ, ಹರಿಹರ ಪಳ್ಳತ್ತಡ್ಕ- ಹೆತ್ತವರು — ಬಾಲಕೃಷ್ಣ ಭೀಮಗುಳಿ