Advertisement

ಸೋಮವಾರದಿಂದ ಪುಟಾಣಿಗಳೂ ಶಾಲೆಗೆ

01:15 AM Oct 19, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅ. 25ರಿಂದ 1ರಿಂದ 5ನೇ ತರಗತಿಯನ್ನು ಶೇ. 50ರ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಂಭಿಸಲು ಉಭಯ ಜಿಲ್ಲಾಡಳಿತಗಳು ಅನುಮತಿ ನೀಡಿವೆ.

Advertisement

ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಭೌತಿಕ ತರಗತಿಗಳಿಗೆ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಕೋವಿಡ್‌ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಈಜು ಕೊಳಕ್ಕೆ ಅನುಮತಿ
ಜಿಲ್ಲೆಯಾದ್ಯಂತ ಈಜುಕೊಳಗಳನ್ನು ಪ್ರತೀ ಬ್ಯಾಚ್‌ನ ಶೇ. 50 ಸಾಮರ್ಥ್ಯಕ್ಕೆ ಸೀಮಿತಗೊಳಿಸಿ ಅನುಮತಿ ನೀಡಲಾಗಿದೆ. ಎರಡು ಡೋಸ್‌ ಲಸಿಕೆ ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಈಜುಕೊಳಗಳಲ್ಲಿ ಪ್ರತೀ ಬ್ಯಾಚ್‌ನ ಶೇ. 50 ಸಾಮರ್ಥ್ಯಕ್ಕೆ ಅನುಗುಣವಾಗಿ ಅನುಮತಿಸಬೇಕು. ಪ್ರವೇಶದ್ವಾರದಲ್ಲಿ ಅನುಮತಿಸಬಹುದಾದ ಸಂಖ್ಯೆ ಪ್ರದರ್ಶಿಸಬೇಕು. ಪ್ರವೇಶದ ಸಮಯದಲ್ಲಿ ಎಲ್ಲರನ್ನು ಜ್ವರ ಮತ್ತು ಉಸಿರಾಟದ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಬೇಕು. ರೋಗ ಲಕ್ಷಣ ರಹಿತರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಎರಡು ಡೋಸ್‌ ಲಸಿಕೆ ಪ್ರಮಾಣ ಪತ್ರಗಳನ್ನು ಹೊಂದಿರುವವರಿಗೆ ಮಾತ್ರ ಅನುಮತಿಸಬೇಕು. ಪ್ರತೀ ಬ್ಯಾಚ್‌ನ ಅನಂತರ ಈಜುಗಾರರು ಉಪಯೋಗಿಸಿರುವ ವಿಶ್ರಾಂತಿ ಕೊಠಡಿಗಳು, ನಡೆದಾಡುವ ಜಾಗಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳನ್ನು ಶೇ. 1 ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣವನ್ನು ಬಳಸಿ ಸ್ವತ್ಛಗೊಳಿಸಬೇಕು.

ಇದನ್ನೂ ಓದಿ:ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

Advertisement

ಆದೇಶ ಪಾಲಿಸದಿದ್ದರೆ
ಕ್ರಿಮಿನಲ್‌ ಪ್ರಕರಣ
ಆದೇಶ ಪಾಲಿಸದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಉಭಯ ಜಿಲ್ಲಾಧಿಕಾರಿಗಳಾದ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮತ್ತು ಕೂರ್ಮಾ ರಾವ್‌ ಎಂ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು
-ಎರಡು ಡೋಸ್‌ ಕೋವಿಡ್‌ ನಿರ್ಬಂಧಕ ಲಸಿಕೆ ಪಡೆದಿರುವ ಶಿಕ್ಷಕರು ಹಾಗೂ ಸಿಬಂದಿಗೆ ಮಾತ್ರ ಅನುಮತಿ
-50 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರು ಫೇಸ್‌ಶೀಲ್ಡ್‌ ಅನ್ನು ಹೆಚ್ಚುವರಿಯಾಗಿ ಬಳಸಬೇಕು.
– ಪ್ರತೀದಿನ ತರಗತಿ ಕೊಠಡಿ ಹಾಗೂ ವಿಶ್ರಾಂತಿ ಕೊಠಡಿಯನ್ನು ಶೇ. 1 ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣ ಬಳಸಿ ಸೋಂಕು ರಹಿತಗೊಳಿಸಬೇಕು
– ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್‌ ವ್ಯವಸ್ಥೆ ಇರಬೇಕು
– ಹ್ಯಾಂಡ್‌ ಸ್ಯಾನಿಟೈಸರ್‌ ಒದಗಿಸಬೇಕು.
– ಸಾಧ್ಯವಾದಷ್ಟು ಒಂದು ಮೀಟರ್‌ ದೈಹಿಕ ಅಂತರವನ್ನು ಕಾಪಾಡಬೇಕು.
– ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಮಕ್ಕಳು ಒಟ್ಟುಗೂಡುವಂತಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next