Advertisement
ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಶಿಕ್ಷಣ ಪಡೆದ 11 ಸರಕಾರಿ ಶಾಲೆಗಳನ್ನು 16.88 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ರಾಜ್ಯ ಸರಕಾರ 2021ರ ಬಜೆಟ್‌ನಲ್ಲಿ ಘೋಷಿಸಿತ್ತು. ಅನಂತರ ಇದಕ್ಕಾಗಿ ಅನುದಾನ ಮೀಸಲಿರಿಸಿ, 2021-22ನೇ ಆರ್ಥಿಕ ವರ್ಷ ಕೊನೆಗೊಳ್ಳುವುದರೊಳಗೆ ಅನುಷ್ಠಾನಗೊಳಿಸುವಂತೆ 2021 ಜು. 17ರಂದು ಮರು ಆದೇಶ ನೀಡಿತ್ತು. ಆದರೆ ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಈ ಬಗ್ಗೆ ಉದಯವಾಣಿ 2021 ಡಿ. 26ರಂದು “ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳಿಗೆ ಇನ್ನೂ ಕೈಗೂಡದ ಅಭಿವೃದ್ಧಿ ಭಾಗ್ಯ’ ಎನ್ನುವ ವಿಶೇಷ ವರದಿ ಪ್ರಕಟಿಸಿತ್ತು. ಈಗ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಯೋಜನೆ ಶೀಘ್ರದಲ್ಲಿ ಕೈಗೂಡಲಿದೆ.
-ಡಾ| ವಿಶಾಲ್ ಆರ್., ಆಯುಕ್ತರು,
ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ