Advertisement

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ  ನಿಗದಿ ವಿಷಯವು ಸರಕಾರಕ್ಕೆ ತಲೆನೋವಾಗುತ್ತಿದ್ದು,  ಅವಸರದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಸುರೇಶ್‌ ಕುಮಾರ್‌ ಅವರು ಹೇಳಿದ್ದಾರೆ. ಆದರೆ ಪಾಲಕರು ಆತಂಕ ಪಡಬೇಕಾಗಿಲ್ಲ. ಶಾಲೆಗಳು ಶುಲ್ಕ ಪಾವತಿಸುವಂತೆ ಒತ್ತಡ ಹಾಕಿದಲ್ಲಿ ದೂರು ನೀಡಬಹುದು ಎಂದು ಸಚಿವರು ತಿಳಿಸಿದ್ದಾರೆ.

Advertisement

ಶೇ.30ರಿಂದ  35ರಷ್ಟು  ಅಥವಾ   ಶೇ.25ರಿಂದ  50ರಷ್ಟು  ಶುಲ್ಕ ವಿನಾ ಯಿತಿ ಬಗ್ಗೆ ಸರಕಾರ ಯೋಚಿಸುತ್ತಿದೆ. ಇದಕ್ಕೆ  ಶಾಲೆಗಳ ಆಡಳಿತ ಮಂಡಳಿ ಗಳು ಒಪ್ಪುತ್ತಿಲ್ಲ.  ಶೇ.10ಕ್ಕಿಂತ ಜಾಸ್ತಿ ಶುಲ್ಕ ಇಳಿಸಿದರೆ ಶಿಕ್ಷಕರಿಗೆ ವೇತನ ನೀಡು ವುದಿಲ್ಲ ಎಂದು ಹೇಳಿವೆ.

ಇತರ ತರಗತಿ: ಇಂದು ಸಭೆ :

ಪ್ರಥಮ ಪಿಯುಸಿ ಹಾಗೂ 9ನೇ ತರಗತಿ ಆರಂಭ ಸಹಿತ ಶೈಕ್ಷಣಿಕ ವಿಷಯಗಳನ್ನು ಚರ್ಚಿಸಲು ಗುರುವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮತ್ತು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅವರು ಸಭೆ ನಡೆಸಲಿದ್ದಾರೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ನಿತ್ಯದ ತರಗತಿಗಳು ಆರಂಭವಾದಲ್ಲಿ ವಿದ್ಯಾಗಮವನ್ನು 4ನೇ ತರಗತಿವರೆಗೂ ವಿಸ್ತರಿಸುವ ಸಾಧ್ಯತೆಯಿದೆ.  ಆದರೆ 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ರೇಡಿಯೋ ತರಗತಿಗಳು ಈ ಹಿಂದಿನಂತೆ ಮುಂದುವರಿಯಲಿವೆ ಎಂದು ಮೂಲಗಳು ತಿಳಿಸಿವೆ.

20 ಸಾವಿರ ಶಿಕ್ಷಕರ ನೇಮಕ : ಸುರೇಶ್‌ ಕುಮಾರ್‌ :

Advertisement

ಬೆಂಗಳೂರು: ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ಸರಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿದ್ದಾರೆ.ರಾಜ್ಯ ಸರಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ ಸಹಿತ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳ ನೌಕರರ ಸಂಘಗಳ ಪದಾಧಿಕಾರಿಗಳ ಜತೆಗಿನ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next