Advertisement
ಶಾಲೆ-ಕಾಲೇಜು ಆರಂಭ ಸಂಬಂಧ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನ. 4ರಿಂದ 6ರ ವರೆಗೆ ಮೂರು ದಿನ ಅಧಿಕಾರಿಗಳು, ಶಿಕ್ಷಣ ತಜ್ಞರು, ಜನಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನ. 6ರಂದು ಶಾಲಾರಂಭಕ್ಕೆ ಸಂಬಂಧಿಸಿ ದಂತೆ ಸರಕಾರದಿಂದ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ದೀರ್ಘ ವಿರಾಮದ ಬಳಿಕ ಶಿಕ್ಷಕರು ಸೋಮವಾರದಿಂದ ಶಾಲೆಗೆ ಹಾಜರಾಗಿದ್ದಾರೆ. ವಿದ್ಯಾಗಮ ಪ್ರಗತಿ ಪರಿಶೀಲನೆ, ತರಗತಿ ಆರಂಭವಾದ ಬಳಿಕ ಮಾಡಬೇಕಾದ ತುರ್ತು ಕಾರ್ಯಗಳ ಸಹಿತ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆಗೆ ಏನೇನು ಮಾಡ ಬಹುದು ಎಂಬುದರ ಕಾರ್ಯಗಳನ್ನು ಆರಂಭಿಸಿದ್ದಾರೆ ಎಂದು ಸಾ. ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಮಮತಾ ವಿ. ನಾಯಕ್ ಮಾಹಿತಿ ನೀಡಿದ್ದಾರೆ. ಶಾಲೆಗಳಿಗೆ ಮಕ್ಕಳು ಬರುವಂತಿಲ್ಲ ಮತ್ತು ಮಕ್ಕಳನ್ನು ಶಾಲೆಗೆ ಕರೆಯುವಂತಿಲ್ಲ. ಆದರೆ ಶಾಲಾ ಶೈಕ್ಷಣಿಕ ಚಟು ವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಶಿಕ್ಷಕರು ಏನೇನು ಮಾಡಬೇಕು ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಈಗಾಗಲೇ ಮುಖ್ಯಶಿಕ್ಷಕರ ಮೂಲಕ ಶಿಕ್ಷಕರಿಗೆ ತಲುಪಿಸಿ ದ್ದೇವೆ. ಕೊರೊನಾ ತಡೆ ಕಾರ್ಯದಲ್ಲಿರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರು ಶಾಲೆಗೆ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದರು.