Advertisement

ಶಾಲಾ ಪ್ರವೇಶ: ತಿದ್ದುಪಡಿ ಆದೇಶ ಹೊರಡಿಸಿದ ರಾಜ್ಯ ಸರಕಾರ

09:55 PM Nov 15, 2022 | Team Udayavani |

ಬೆಂಗಳೂರು: 2025-26ನೇ ಸಾಲಿನಿಂದ ಅನ್ವಯಿಸುವಂತೆ ರಾಜ್ಯದಲ್ಲಿ 1ನೇ ತರಗತಿಗೆ ಮಕ್ಕಳನ್ನು ಸೇರಿಸಲು ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮದ ಬಗ್ಗೆ ಸರಕಾರ ತಿದ್ದುಪಡಿ ಆದೇಶ ಹೊರಡಿಸಿದೆ.

Advertisement

ಈ ಹಿಂದೆ ಇಲಾಖೆಯು ಮುಂದಿನ ವರ್ಷದಿಂದಲೇ 1ನೇ ತರಗತಿಗೆ 6 ವರ್ಷ ವಯೋಮಿತಿ ಕಡ್ಡಾಯಗೊಳಿಸಿದ ಪರಿಣಾಮ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು 1ನೇ ತರಗತಿಗೆ ದಾಖಲಾತಿ ಮಾಡುವ ಬಗ್ಗೆ ಗೊಂದಲ ಏರ್ಪಟ್ಟಿತ್ತು.

ಈ ವರೆಗೆ 1ನೇ ತರಗತಿ ದಾಖಲಾತಿಗೆ ಸರಕಾರ 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳ ವರೆಗೆ ವಯೋಮಿತಿ ನಿಗದಿಪಡಿಸಿತ್ತು. ನಿಯಮ ಬದಲಿಸಿದ್ದು ಸರಿಯಲ್ಲ, ಇದನ್ನು ಪರಿಶೀಲಿಸಬೇಕೆಂದು ವಿವಿಧ ಸಂಘಟನೆಗಳು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಮನವಿ ಸಲ್ಲಿಸಿದ್ದವು. ಇದೀಗ ಈ ನಿಯಮ ತಿದ್ದುಪಡಿ ಮಾಡಿ 2025-26ನೇ ಸಾಲಿನಿಂದ ಅನ್ವಯವಾಗುವಂತೆ ಆದೇಶ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next