ಕಂಕನಾಡಿ: ಬಿಲ್ಲವ ಸೇವಾ ಸಮಾಜ ಗರೋಡಿ ಕಂಕನಾಡಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮವು ಗರೋಡಿಯ ಸರ್ವಮಂಗಳೇ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಧರ್ಮಪಾಲ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.
ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಮೋಹನ್ ಪಡೀಲ್, ದಾಮೋದರ ನಿಸರ್ಗ, ವಸಂತ ಪೂಜಾರಿ, ಗೋಪಾಲ ಪೂಜಾರಿ, ಗಣ್ಯ ಅತಿಥಿಗಳಾದ ಡಾ| ಪವನ್‌ಚಂದ್, ಮಾಜಿ ಪ್ರಧಾನ ಕಾರ್ಯದರ್ಶಿ ದೇವೇಂದ್ರ, ಉಪಾಧ್ಯಕ್ಷ ಭರತೇಶ್ ಅಮೀನ್, ಕಾರ್ಯದರ್ಶಿ ಜಯಶ್ರೀ ಉಪಸ್ಥಿತರಿದ್ದರು.
ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನಿರೀûಾ ಜೆ. ಕರ್ಕೆàರ, ಶ್ರೀಯಾ, ಶ್ರಮಿಕಾ, ಸೋನಲ್ ಎಸ್. ಎಂ., ಸತ್ಯರಾಜ್, ಅನುರಾಗ್, ಹಾಗೂ ಎಸೆಸೆ ಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ರಕ್ಷಿತಾ ಎಂ., ಜೀಕ್ಷಿತಾ, ಭವಿತ್ ಎಲ್. ಕರ್ಕೆàರ, ದೀಕ್ಷಿತ್ ಕುಮಾರ್ ಮತ್ತು ಸೌರಭ್ ಜಿ. ಅಂಚನ್ ಅವರನ್ನು ಸಮ್ಮಾನಿಸಲಾಯಿತು.
ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ತಲಾ ರೂ. 5,000 ದಂತೆ ವಿಶೇಷ ನಗದು ಬಹುಮಾನ ನೀಡಲಾಯಿತು. ಪಿಯುಸಿಯ ಅನಂತರದ ಉನ್ನತ ವ್ಯಾಸಂಗ ಮಾಡುವ ಸುಮಾರು 80 ವಿದ್ಯಾರ್ಥಿಗಳಿಗೆ ಒಟ್ಟು 80,000 ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಖಜಾಂಚಿ ರಮಾನಂದ ಕೆ. ಹಾಗೂ ಮಾಜಿ ಖಜಾಂಚಿ ವಿಶ್ವನಾಥ ಮರೋಳಿ ನೆರವೇರಿಸಿದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಅಂಚನ್ ಸ್ವಾಗತಿಸಿದರು. ವಿದ್ಯಾ ಸಮಿತಿಯ ಸಂಚಾಲಕ ಮಹಾಬಲ ಪೂಜಾರಿ ಪ್ರಸ್ತಾವನೆಗೈದರು. ಮಾಜಿ ಪ್ರಧಾನ ಕಾರ್ಯದರ್ಶಿ ಜಯ ಪೂಜಾರಿ ವಂದಿಸಿದರು. ಮಾಜಿ ಖಜಾಂಚಿ ಸಂದೀಪ್ ಸಾಲ್ಯಾನ್ ನಿರೂಪಿಸಿದರು.