Advertisement

ಹಡಿಲು ಭೂಮಿಗೆ ಹಸುರು ಸ್ಪರ್ಶ ನೀಡಿದ ಯೋಜನೆ

12:32 AM Jul 06, 2020 | Sriram |

ಕುಂದಾಪುರ: ರೈತರು ಭತ್ತದ ಬೆಳೆಯನ್ನು ಬೆಳೆಯುವಲ್ಲಿ ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದು ಕೂಲಿಯಾಳುಗಳ ಸಮಸ್ಯೆ ಅತ್ಯಂತ ಪ್ರಮುಖವಾಗಿದೆ.

Advertisement

ಅಧಿಕ ಖರ್ಚು- ಕಡಿಮೆ ಆದಾಯ, ಬೆಂಬಲ ಬೆಲೆ ಇಲ್ಲದಿ ರುವುದು ಇತ್ಯಾದಿ ಕಾರಣಗಳಿಂದ ಭತ್ತದ ಗದ್ದೆಯನ್ನು ಹಡಿಲು ಬಿಟ್ಟಿದ್ದಾರೆ.

ಪ್ರಸ್ತುತ ವರ್ಷ ಕೋವಿಡ್‌ -19 ಕಾರಣದಿಂದ ಉದ್ಯೋಗ ಇಲ್ಲದಿರುವ ಸಂದರ್ಭದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್‌ನ ಕೃಷಿ ವಿಭಾಗದ ಮೂಲಕ ಯಂತ್ರಶ್ರೀ ಯೋಜನೆ ತಂದಿದ್ದು ಕುಂದಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಹಡಿಲು ಭೂಮಿಗೆ ಹಸುರು ಸ್ಪರ್ಶ ನೀಡಲು ಮುಂದಾಗಿದ್ದಾರೆ.

ಸಾಂಕೇತಿಕವಾಗಿ ಕೋಟೇಶ್ವರ ವಲಯದ ಬೀಜಾಡಿಯ ರೈತರಾದ ಸತ್ಯನಾರಾಯಣ ಹೆಬ್ಟಾರ್‌ ಅವರು 5 ವರ್ಷಗಳಿಂದ ಹಡಿಲು ಬಿಟ್ಟಿದ್ದ 1 ಎಕರೆ ಭತ್ತದ ಗದ್ದೆಗೆ ಹಸುರು ಸ್ಪರ್ಶ ನೀಡಲಾಯಿತು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ನಾಗರಾಜ್‌, ಒಕ್ಕೂಟದ ಅಧ್ಯಕ್ಷೆ ಮಹಾಲಕ್ಷ್ಮೀ, ಚಾಲಕರಾದ ಅಶೋಕ್‌, ರತ್ನಾಕರ್‌, ಸದಸ್ಯೆ ಗೀತಾ ಹೆಬ್ಟಾರ್‌ ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿ ಚೇತನ್‌ ಕುಮಾರ್‌ ನಿರ್ವಹಿಸಿದರು. ಹಲವು ರೈತರು ಯಾಂತ್ರೀಕೃತ ಭತ್ತ ನಾಟಿಯನ್ನು ವೀಕ್ಷಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next