Advertisement

PM Modi ಸಿನೆಮಾದಲ್ಲಿ ಹಗರಣಗಳೇ: ಖರ್ಗೆ

01:04 AM Jul 02, 2024 | Team Udayavani |

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ವಿರುದ್ಧ ಮುಗಿಬಿದ್ದಿರೆ. “ಮೋದಿ ಚುನಾವಣ ಭಾಷಣಗಳಲ್ಲಿ, ಕಳೆದ 10 ವರ್ಷಗಳಲ್ಲಿ ನಡೆದಿದ್ದು ಕೇವಲ ಟ್ರೈಲರ್‌, ಸಿನೆಮಾ ಇನ್ನೂ ಬಾಕಿಯಿದೆ ಎನ್ನುತ್ತಿದ್ದರು. ಎನ್‌ಡಿಎ 3ನೇ ಅವಧಿ ಪ್ರಶ್ನೆಪತ್ರಿಕೆಗಳ ಸೋರಿಕೆ, ಕಾಶ್ಮೀರದಲ್ಲಿ ಉಗ್ರ ದಾಳಿ, ರೈಲು ಅಪಘಾತ, ವಿಮಾನ ನಿಲ್ದಾಣದಲ್ಲಿ ಮೇಲ್ಛಾವಣಿ ಕುಸಿತ, ಟೋಲ್‌ ತೆರಿಗೆ ಏರಿಕೆಗಳೇ ತುಂಬಿಕೊಂಡಿವೆ ಎಂದು ವ್ಯಂಗ್ಯವಾಡಿದ್ದಾರೆ.

Advertisement

“ಪ್ರಧಾನಿಯ ಸಿನೆಮಾ ಹೇಗಿರಬಹುದೆಂದು ಕಲ್ಪಿಸಿ ಕೊಂಡರೆ, ಕಳೆದ 1 ತಿಂಗಳನ್ನು ನೋಡಬಹುದು. ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ, ಪರೀಕ್ಷೆಗಳೇ ರದ್ದಾಗಿವೆ. ರೈಲು ಅಪಘಾತಗಳಾಗಿವೆ, ಕಾಶ್ಮೀರದಲ್ಲಿ 3 ಉಗ್ರ ದಾಳಿಗಳಾಗಿವೆ, ರಾಮ ಮಂದಿರದಲ್ಲಿ ಸೋರಿಕೆಯಾಗಿದೆ, 3 ವಿಮಾನ ನಿಲ್ದಾಣಗಳಲ್ಲಿ ಮೇಲ್ಛಾವಣಿಯೇ ಕುಸಿದುಹೋಗಿದೆ, ಟೋಲ್‌ ತೆರಿಗೆಗಳಲ್ಲಿ ಹೆಚ್ಚಳವಾಗಿದೆ, ರೂಪಾಯಿ ಮೌಲ್ಯ ಕುಸಿತವಾಗಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next