Advertisement

ಮಗಳು ಸೆ*ಕ್ಸ್‌ ರ್‍ಯಾಕೆಟ್‌ ನಲ್ಲಿದ್ದಾಳೆಂದು ಸ್ಕ್ಯಾಮ್ ಕರೆ;‌ ಆತಂಕದಿಂದ ಅಸುನೀಗಿದ ತಾಯಿ!

11:43 AM Oct 04, 2024 | Team Udayavani |

ಆಗ್ರಾ: ಟೆಲಿಫೋನ್‌ ನಲ್ಲಿನ ವಂಚನೆಗಳು (Cyber Scam) ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ಪ್ರಯತ್ನದ ವಂಚನೆಯ ಕಾರಣದಿಂದ ಮಹಿಳೆಯೊಬ್ಬರು ಜೀವ ಕಳೆದುಕೊಂಡ ಘಟನೆ ವರದಿಯಾಗಿದೆ.

Advertisement

ಕಳೆದ ಸೋಮವಾರ (ಸೆ.30) ಆಗ್ರಾದ (Agra) ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ವಾಟ್ಸಾಪ್ ಕರೆಯೊಂದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದಾತನ ವಾಟ್ಸಾಪ್‌ ಡಿಪಿಐಲ್ಲಿ ಪೊಲೀಸ್ ಅಧಿಕಾರಿಯ ಫೋಟೋ ಇತ್ತು. ತನ್ನ ಕಾಲೇಜಿಗೆ ಹೋಗುತ್ತಿರುವ ಮಗಳು ಸೆ*ಕ್ಸ್ ರ್‍ಯಾಕೆಟ್‌ ನಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ಕರೆ ಮಾಡಿದ ವ್ಯಕ್ತಿ ಶಿಕ್ಷಕಿಗೆ ಹೇಳಿದ್ದಾನೆ.

ವರ್ಮಾ ಅವರ ಮಗ ದೀಪಾಂಶು ಮಾತನಾಡಿ, ಮಧ್ಯಾಹ್ನದ ವೇಳೆಗೆ ಕರೆ ಬಂದಿದ್ದು, ಮಗಳು ಸುರಕ್ಷಿತವಾಗಿ ಮನೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು 1 ಲಕ್ಷ ರೂ. ನಿರ್ದಿಷ್ಟ ಖಾತೆಗೆ ಜಮಾ ಮಾಡುವಂತೆ ಆ ವ್ಯಕ್ತಿ ಕೇಳಿದ್ದಾನೆ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದ.

ತಮ್ಮ ಮಗಳು ಸೆಕ್ಸ್ ರ್‍ಯಾಕೆಟ್ ಸಂಬಂಧಿತ ಪ್ರಕರಣದಲ್ಲಿ ಸಿಲುಕಿದ್ದು, ಸಮಾಜಕ್ಕೆ ತಿಳಿದರೆ ಕುಟುಂಬದ ಮರ್ಯಾದೆ ಹೋಗುತ್ತದೆ, ಆದ ಕಾರಣ ತಾನು ಕರೆ ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಎಂಎಸ್ ವರ್ಮಾಗೆ ತಿಳಿಸಿದ್ದಾನೆ.

Advertisement

“ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿರುವ ಸರ್ಕಾರಿ ಬಾಲಕಿಯರ ಜೂನಿಯರ್ ಹೈಸ್ಕೂಲ್‌ ನಲ್ಲಿ ಪಾಠ ಮಾಡುತ್ತಿದ್ದರು. ಆ ವ್ಯಕ್ತಿಯಿಂದ ಕರೆ ಬಂದ ನಂತರ ಅವರು ಗಾಬರಿಗೊಂಡು ನನಗೆ ಕರೆ ಮಾಡಿದರು ಮತ್ತು ಅವರು ಕರೆ ಸ್ವೀಕರಿಸಿದ ಸಂಖ್ಯೆಯನ್ನು ನಾನು ಕೇಳಿದೆ. ನಾನು ಸಂಖ್ಯೆಯನ್ನು ಪರಿಶೀಲಿಸಿದಾಗ , ಇದು +92 ಹೊಂದಿದೆ. ತಾಯಿ ಆತಂಕದಿಂದ ಅಸ್ವಸ್ಥಳಾಗಿದ್ದಳು” ಎಂದು ದೀಪಾಂಶು ಹೇಳಿದರು.

“ನಾನು ಆಕೆಯನ್ನು ಸಮಾಧಾನಪಡಿಸಿದೆ. ನಾನು ನನ್ನ ಸಹೋದರಿಯೊಂದಿಗೆ ಮಾತನಾಡಿದೆ, ಆಕೆ ಕಾಲೇಜಿನಲ್ಲಿ ಕ್ಷೇಮವಾಗಿದ್ದಳು. ಆದರೆ ನನ್ನ ತಾಯಿಯ ಆರೋಗ್ಯವು ಹದಗೆಡುತ್ತಲೇ ಇತ್ತು. ಶಾಲೆಯಿಂದ ಹಿಂತಿರುಗಿದಾಗ, ಸ್ವಲ್ಪ ನೋವು ಅನುಭವಿಸುತ್ತಿದ್ದಾಳೆ ಎಂದು ಹೇಳಿದರು. ಆದರೆ ಪರಿಸ್ಥಿತಿ ಹದಗೆಟ್ಟು ಆಕೆ ಅಸುನೀಗಿದರು”ಎಂದು ಪುತ್ರ ಹೇಳಿದರು.

ಕುಟುಂಬದವರು ಗುರುವಾರ ದೂರು ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next