Advertisement

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

08:18 PM Apr 26, 2024 | Team Udayavani |

ಅರಾರಿಯಾ/ಮುಂಗೇರ್ (ಬಿಹಾರ): EVM (ವಿದ್ಯುನ್ಮಾನ ಮತಯಂತ್ರ) ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ “ಬಲವಾದ ಕಪಾಳಮೋಕ್ಷ” ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ತಮ್ಮ ವಿರುದ್ಧ ಅಪನಂಬಿಕೆ ಸೃಷ್ಟಿಸಿದ ಪಾಪ ಎಸಗಿರುವ ಪ್ರತಿಪಕ್ಷಗಳು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಬಿಹಾರದ ಅರಾರಿಯಾ ಮತ್ತು ಮುಂಗರ್ ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಿಟ್ಟ ಮೀಸಲಾತಿಯನ್ನು ತಮ್ಮ ನೆಚ್ಚಿನ ಮುಸ್ಲಿಮರ ಮತ ಬ್ಯಾಂಕ್‌ಗಾಗಿ ಕದಿಯಲು” ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಮತ್ತೆ ಆರೋಪಿಸಿದರು.

ಇದನ್ನೂ ಓದಿ: EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

“ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಮೈತ್ರಿ ಪಕ್ಷಗಳು ಅಧಿಕಾರದಲ್ಲಿದ್ದಾಗ, ಬಡವರು, ಹಿಂದುಳಿದವರು ಮತ್ತು ದಲಿತರು ಮತಗಟ್ಟೆ ವಶಪಡಿಸಿಕೊಳ್ಳುವ ಮೂಲಕ ನಿಮ್ಮನ್ನು ಮತಗಳಿಂದ ವಂಚಿತರಾಗಿಸಿದ್ದರು. ವಿದ್ಯುನ್ಮಾನ ಮತಯಂತ್ರಗಳ ಪರಿಚಯದೊಂದಿಗೆ, ಅವರಿಗೆ ತಮ್ಮ ಹಳೆಯ ಆಟವನ್ನು ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಇವಿಎಂಗಳ ವಿರುದ್ಧ ಅಪನಂಬಿಕೆ ಸೃಷ್ಟಿಸುವ ಪಾಪ ಮಾಡಿದ್ದಾರೆ ಎಂದು ಅರಾರಿಯಾದಲ್ಲಿ ಪ್ರಧಾನಿ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next