Advertisement

“ಮಹಾ” ಸರ್ಕಾರ ರಚನೆ; ಅಂತಿಮ ಆದೇಶ ಮಂಗಳವಾರಕ್ಕೆ ಕಾಯ್ದಿರಿಸಿದ ಸುಪ್ರೀಂಕೋರ್ಟ್

09:57 AM Nov 26, 2019 | Team Udayavani |

ನವದೆಹಲಿ:ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್ ಸಿಪಿಯ ಕೆಲವು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ವಾದ, ಪ್ರತಿವಾದ ಆಲಿಸಿದ ನಂತರ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

Advertisement

ಬಿಜೆಪಿ ನೇತೃತ್ವದ ಸರ್ಕಾರಕ್ಕೆ 170 ಶಾಸಕರ ಬೆಂಬಲ ಇದೆ. ಹೀಗಾಗಿ ರಾಜ್ಯಪಾಲರು ದೇವೇಂದ್ರ ಫಡ್ನವೀಸ್ ಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ ಪರ ವಕೀಲರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ತುಷಾರ್ ಮೆಹ್ತಾ ವಾದ:

ಸರ್ಕಾರ ರಚನೆ ಮಾಡಲು ಫಡ್ನವೀಸ್ ಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಫಡ್ನವೀಸ್ ಗೆ 170 ಶಾಸಕರ ಬೆಂಬಲವಿದೆ. ಅವರಿಗೆ ಬಹುಮತ ಇದೆ. ಹೀಗಾಗಿ ಸರ್ಕಾರ ರಚನೆ ಮಾಡಿದ್ದಾರೆ. ಯಾವುದೇ ಶಾಸಕರ ಸಹಿ ಪೋರ್ಜರಿ ಮಾಡಿಲ್ಲ. ಪವಾರ್ ಕುಟುಂಬದಲ್ಲಿ ಆಗಿರುವುದಕ್ಕೂ, ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಫಡ್ನವೀಸ್ ಪರ ಹಿರಿಯ ವಕೀಲ ರೋಹ್ಟಗಿ ವಾದ ಮಂಡಿಸಿದರು.

ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬೆಂಬಲ ಇಲ್ಲ ಎಂದು ಎನ್ ಸಿಪಿ ಹೇಳಿದೆ. ಕೌಟುಂಬಿಕ ಜಗಳದಿಂದ ನಮಗೆ ಆಗುವುದೇನಿದೆ. ಸಿಎಂ ಫಡ್ನವೀಸ್ ಸರ್ಕಾರಕ್ಕೆ ಬಹುಮತ ಇದೆಯಾ ಎಂದು ನ್ಯಾ.ಖನ್ನಾ ಪ್ರಶ್ನಿಸಿದರು. ಹೌದು..ರಾಜ್ಯಪಾಲರಿಗೆ ನೀಡಿದ ಪತ್ರದಲ್ಲಿ ಶಾಸಕರ ಸಹಿ ಇದೆ.

Advertisement

ಬಹುಮತ ಸಾಬೀತು ಮಾಡಲು ಸಮಯ ನಿಗದಿ ಮಾಡಬಾರದು. ಬಹುಮತ ಸಾಬೀತು ಮಾಡಲು ಫಡ್ನವೀಸ್ ಸರ್ಕಾರ ಸಿದ್ದವಿದೆ ಎಂದ ರೋಹ್ಟಗಿ.

ಸದನದಲ್ಲಿ ಬಹುಮತ ಸಾಬೀತು ಈಗ ಅನಿವಾರ್ಯ ಎಂದ ನ್ಯಾ.ಸಂಜೀವ್ ಖನ್ನಾ.ಬಹುಮತ ಪರೀಕ್ಷೆ ರಾಜಭವನದಲ್ಲಿ ನಡೆಯುವಂತಿಲ್ಲ. ಎಲ್ಲಾ ಪ್ರಕರಣಗಳಲ್ಲಿ 24 ಗಂಟೆಯೊಳಗೆ ಬಹುಮತ ಪರೀಕ್ಷೆ ನಡೆಯಬೇಕೆಂದು ಒಪ್ಪಿಕೊಂಡಿದ್ದಾರೆ.

ಕಪಿಲ್ ಸಿಬಲ್ ವಾದ:

ಬಹುಮತ ಸಾಬೀತುಪಡಿಸಲು ಈಗಾಗಲೇ ನಿಯಮ ರೂಪಿಸಲಾಗಿದೆ. ಆದರೆ ಕೋರ್ಟ್ ಸದನದ ನಿಯಮವಳಿ ನಿಯಂತ್ರಿಸುವ ಆದೇಶ ನೀಡಬಾರದು. ಹಂಗಾಮಿ ಸ್ಪೀಕರ್ ಆಯ್ಕೆಯಾದ ಬಳಿಕ ಶಾಸಕರ ಪ್ರಮಾನವಚನ ಸ್ವೀಕಾರ ನಡೆಯಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ನಡೆಯಲಿ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next