Advertisement

ರಫೇಲ್‌ ಪರಾಮರ್ಶೆ ಮೇಲ್ಮನವಿ, ರಾಹುಲ್‌ ಕೋರ್ಟ್‌ ನಿಂದನೆ ಮೇ 10ರಂದು ವಿಚಾರಣೆ

08:57 AM May 07, 2019 | Sathish malya |

ಹೊಸದಿಲ್ಲಿ : ರಫೇಲ್‌ ಫೈಟರ್‌ ಜೆಟ್‌ ಖರೀದಿ ವ್ಯವಹಾರ ಕುರಿತ ತನ್ನ ಹಿಂದಿನ ತೀರ್ಪಿನ ಪರಾಮರ್ಶೆಯನ್ನು ಕೋರಿರುವ ಮೇಲ್ಮನವಿಗಳು ಮತ್ತು ಚೌಕಿದಾರ್‌ ಚೋರ್‌ ಹೈ ಎಂಬ ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಯನ್ನು ಸುಪ್ರೀಂ ಕೋರ್ಟಿಗೆ ಆರೋಪಿಸಿರುವ ರಾಹುಲ್‌ ಗಾಂಧಿ ವಿರುದ್ಧದ ಕೋರ್ಟ್‌ ನಿಂದನೆ ಅರ್ಜಿಯನ್ನು ತಾನು ಮೇ 10 ರಂದು ಜತೆಯಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯ ಇಂದು ಸೋಮವಾರ ಹೇಳಿದೆ.

Advertisement

ಕಳೆದ ವರ್ಷ ಡಿಸೆಂಬರ್‌ 14ರಂದು ರಫೇಲ್‌ ವಿಚಾರದಲ್ಲಿ ನೀಡಲಾಗಿದ್ದ ತನ್ನ ತೀರ್ಪಿನ ವಿರುದ್ದದ ಮೇಲ್ಮನವಿಗಳು ಮೇ 10ರಂದು ವಿಚಾರಣೆಗೆ ಬರಲಿವೆ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ವಿಶೇಷ ಪೀಠ ಹೇಳಿತು.

ರಫೇಲ್‌ ತೀರ್ಪಿನ ಮೇಲ್ಮನವಿಗಳು ಮತ್ತು ರಾಹುಲ್‌ ಗಾಂಧಿ ವಿರುದ್ಧದ ಕೋರ್ಟ್‌ ನಿಂದನೆ ಅರ್ಜಿ ಯನ್ನು ತಾನು ಈ ಹಿಂದೆ ಒಟ್ಟಿಗೇ ಕೈಗೆತ್ತಿಕೊಳ್ಳುವುದಾಗಿ ಆದೇಶ ಹೊರಡಿಸಿದ್ದರೂ ಈ ಎರಡು ಕೇಸುಗಳನ್ನು ಬೇರೆ ಬೇರೆ ದಿನಾಂಕಕ್ಕೆ ಹೇಗೆ ನಿಗದಿಸಲಾಯಿತು ಎಂಬ ಬಗ್ಗೆ ಜಸ್ಟಿಸ್‌ ಎಸ್‌ ಕೆ ಕೌಲ್‌ ಮತ್ತು ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡಿರುವ ಪೀಠವು ಅಚ್ಚರಿ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next