Advertisement

ನ್ಯಾ|ಸಂದೇಶ್‌ ಅಭಿಪ್ರಾಯಕ್ಕೆ ತಡೆ; 3 ವಾರಗಳ ಬಳಿಕ ಪ್ರಕರಣ ಲಿಸ್ಟ್‌ ಮಾಡಲು ಸು.ಕೋ. ಸಲಹೆ

12:45 AM Jul 19, 2022 | Team Udayavani |

ಹೊಸದಿಲ್ಲಿ: ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಸಂಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ) ಸೀಮಂತ್‌ ಕುಮಾರ್‌ ಸಿಂಗ್‌ ವಿರುದ್ಧ ಕರ್ನಾಟಕ ಹೈಕೋರ್ಟ್‌ ನ್ಯಾ| ಎಚ್‌.ಪಿ. ಸಂದೇಶ್‌ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಅಲ್ಲದೆ ಎಸಿಬಿ ಬಳಿ ಕೇಳಲಾಗಿದ್ದ ಮುಕ್ತಾಯ ವರದಿಗಳ ಆದೇಶಕ್ಕೂ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾ| ಎನ್‌.ವಿ. ರಮಣ, ನ್ಯಾ| ಕೃಷ್ಣ ಮುರಾರಿ, ನ್ಯಾ| ಹಿಮಾ ಕೋಹ್ಲಿ ಅವರಿದ್ದ ನ್ಯಾಯಪೀಠ ಈ ಆದೇಶ ಪ್ರಕಟಿಸಿದೆ. ಜತೆಗೆ ಐಎಎಎಸ್‌ ಅಧಿಕಾರಿ ಮಂಜುನಾಥ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಅಗತ್ಯವಿಲ್ಲದ ವಿಚಾರಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳು ಉಲ್ಲೇಖ ಮಾಡಿದ್ದಾರೆ ಎಂದು ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದರಿಂದಾಗಿ ಎಸಿಬಿಯ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ಸದ್ಯ ಜೈಲಿನಲ್ಲಿರುವ ಐಎ ಎಸ್‌ ಅಧಿಕಾರಿ ಮಂಜು ನಾಥ್‌ ಅವರಿಗೆ ನಿರಾಳವಾಗಿದೆ.

ವರ್ಗಾವಣೆಗೆ ನಕಾರ ಆದರೆ ಇದೇ ಪ್ರಕರಣಕ್ಕೆ ಪೂರಕ ವಾಗಿ ನ್ಯಾ| ಎಚ್‌.ಪಿ. ಸಂದೇಶ್‌ ಪೀಠದಲ್ಲಿ ಇರುವ ಪ್ರಕರಣ ಗಳನ್ನು ಬೇರೊಂದು ನ್ಯಾಯಪೀಠಕ್ಕೆ ವರ್ಗಾಯಿಸಬೇಕು ಎಂಬ ಅರ್ಜಿ ಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ಒಪ್ಪಿಲ್ಲ. ಹೈಕೋರ್ಟ್‌ ನ್ಯಾಯಮೂರ್ತಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತೆಗೆದುಹಾಕ ಬೇಕು ಎಂಬ ಮನವಿಯನ್ನು ಪುರಸ್ಕರಿಸಿಲ್ಲ. ಇತ್ತಂಡಗಳಿಗೂ ಸಮ್ಮತಿಯಾಗುವಂತೆ ವರ್ತಿಸಬೇಕಾಗಿದೆ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಯ ವರ್ತನೆ ಮತ್ತು ಐಎಎಸ್‌ ಅಧಿಕಾರಿಯ ಜಾಮೀನು ವಿಚಾರಗಳಿಗೆ ಪರಸ್ಪರ ಸಂಬಂಧವೇ ಇಲ್ಲ. ಹೈಕೋರ್ಟ್‌ ನ್ಯಾಯಮೂರ್ತಿ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ಬದಲು ಇತರ ವಿಚಾರಗಳಿಗೆ ಗಮನ ಹರಿಸಿದ್ದಾರೆ. ಹೀಗಾಗಿ ನ್ಯಾಯಾಲಯವು ಜಾಮೀನು ಅರ್ಜಿಯನ್ನು ಮಂಜೂರು ಮಾಡುವ ಬಗ್ಗೆ ಗಮನಹರಿಸಲಿ. ಮೂರು ವಾರಗಳ ಬಳಿಕ ಪ್ರಕರಣ ಲಿಸ್ಟ್‌ ಮಾಡುವ ಬಗ್ಗೆ ಪರಿಶೀಲಿಸಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next