Advertisement

ಎಸ್ಸಿ, ಎಸ್ಟಿ ಕಾಯ್ದೆ: ತಡೆಗೆ ಸುಪ್ರೀಂ ನಕಾರ

12:30 AM Jan 25, 2019 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ, ವರ್ಗಗಳ ಮೇಲಿನ ಜಾತಿ ನಿಂದನೆ ಪ್ರಕರಣಗಳಲ್ಲಿ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ನೀಡದಂತೆ ತರಲಾಗಿದ್ದ ತಿದ್ದುಪಡಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಈ ಕುರಿತಂತೆ ಅರ್ಜಿದಾರರಿಗೆ ಸ್ಪಷ್ಟನೆ ನೀಡಿರುವ ನ್ಯಾಯಪೀಠ, ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ಕಾಯ್ದೆಯ ತಿದ್ದುಪಡಿ ವಿಚಾರದಲ್ಲಿ 2018ರ ಮಾರ್ಚ್‌ 20ರಂದು ಸುಪ್ರೀಂ ನೀಡಿದ್ದ ಆದೇಶದ ಬಗ್ಗೆ ಕೇಂದ್ರ ಹಾಗೂ ಕೆಲವು ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಅರ್ಜಿಯನ್ನು ಪರಿಗಣಿಸಲಾಗುವುದು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next