ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ತೀರ್ಪು ಪ್ರಶ್ನಿಸಿ ಟೆಕ್‌ದೈತ್ಯ ಗೂಗಲ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು, ಅರ್ಜಿ ಪರಿಗಣಣೆಗೆ ನಿರಾಕರಿಸಿದೆ. ಅಲ್ಲದೇ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ದಿಂದ ಗೂಗಲ್‌ಗೆ ವಿಧಿಸಲ್ಪಟ್ಟಿರುವ ದಂಡದ ಶೇ.10ರಷ್ಟು ಮೊತ್ತವನ್ನು ಠೇವಣಿ ಇಡಲು ಗೂಗಲ್‌ಗೆ 7 ದಿನಗಳ ಸಮಯಾವಕಾಶವನ್ನು ನೀಡಿದೆ.
ಆ್ಯಂಡ್ರಾಯ್ಡ್ ವ್ಯವಸ್ಥೆಯಲ್ಲಿ ಗೂಗಲ್ ತನ್ನ ಪ್ರಾಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಸಿಸಿಐ ದಂಡ ವಿಧಿಸಿದ್ದು, ದಂಡದ ಮೊತ್ತದ ಶೇ.10 ಪಾವತಿಸುವಂತೆ ಎನ್‌ಸಿಎಲ್‌ಎಟಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೂಗಲ್ ಕೇಂದ್ರದ ಮೆಟ್ಟಿಲೇರಿದ್ದು, ಈಗ ಕೇಂದ್ರಕೂಡ ಅರ್ಜಿ ಪರಿಗಣನೆಗೆ ನಿರಾಕರಿಸಿದೆ.