Advertisement

ಅಯೋಧ್ಯೆ ವಿವಾದದಲ್ಲಿ ಹಸ್ತಕ್ಷೇಪಿಸುವ 32 ಮಧ್ಯಂತರ ಅರ್ಜಿ ವಜಾ

03:48 PM Mar 14, 2018 | udayavani editorial |

ಹೊಸದಿಲ್ಲಿ : ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕೇಸಿಗೆ ಸಂಬಂಧಿಸಿದಂತೆ ಸಲ್ಲಿಸಲ್ಪಟ್ಟ ಸುಮಾರು 32 ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. 

Advertisement

ಪ್ರಖ್ಯಾತರಾಗಿರುವ ಶ್ಯಾಮ್‌ ಬೆನಗಲ್‌, ಅಪರ್ಣಾ ಸೇನ್‌ ಮತ್ತು ತೀಸ್ತಾ ಸೆಟಲ್‌ವಾಡ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗಳೂ ವಜಾಗೊಂಡವುಗಳಲ್ಲಿ ಸೇರಿವೆ.

ಬಾಬರಿ ಮಸೀದಿ – ರಾಮ ಮಂದಿರಕ್ಕೆ ಸಂಬಂಧಿಸಿ ಮೂಲ ಕಕ್ಷಿದಾರರ ಭೂ ಮಾಲಕತ್ವಕ್ಕೆ ಸಂಬಂಧಿಸಿ ಅರ್ಜಿಗಳನ್ನು  ಮಾತ್ರವೇ ತಾನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದ್ದು ಸಂಬಂಧವಿಲ್ಲದ ವ್ಯಕ್ತಿಗಳ ಹಸ್ತಕ್ಷೇಪವನ್ನು ತಾನು ತಿರಸ್ಕರಿಸುತ್ತಿರುವುದಾಗಿ ಹೇಳಿದೆ. 

ವಜಾಗೊಂಡಿರುವ ಮಧ್ಯಂತರ ಅರ್ಜಿಗಳಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರ ಅರ್ಜಿಯೂ ಸೇರಿದೆ. ಆದರೆ ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ತನ್ನ ಮೂಲಭೂತ ಹಕ್ಕಿನ ಅನುಷ್ಠಾನವನ್ನು ಕೋರಿ ಅವರ ಸಲ್ಲಿಸಿರುವ ಅರ್ಜಿಗೆ ಮತ್ತೆ ಜೀವ ನೀಡುವಂತೆ ಸುಪ್ರೀಂ ಕೋರ್ಟ್‌ ಆದೆಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next