ನವದೆಹಲಿ: ಮಧ್ಯಪ್ರದೇಶದ ಧಾರ್ ನಲ್ಲಿರುವ ಭೋಜ್ ಶಾಲಾ ಮತ್ತು ಕಮಲ್ ಮೌಲಾ ಮಸೀದಿಯ ವಿವಾದಿತ ಸ್ಥಳಗಳಲ್ಲಿ ಸಮೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ (ಏಪ್ರಿಲ್ 01) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ಐ)ಗೆ ಅನುಮತಿ ನೀಡಿದೆ.
ಇದನ್ನೂ ಓದಿ:ಯಶ್ ʼToxicʼ ನಲ್ಲಿ ಕರೀನಾ,ಕಿಯಾರಾ ನಟಿಸುವುದು ಪಕ್ಕಾ: ಮೂರನೇ ನಟಿ ಯಾರು?
ಈ ವಿವಾದಿತ ಸ್ಥಳಗಳಲ್ಲಿ ಸಮೀಕ್ಷೆ ನಡೆಸುವಂತೆ ಎಎಸ್ ಐಗೆ ಸೂಚಿಸಿರುವ ಮಧ್ಯಪ್ರದೇಶ ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಸ್ಪಷ್ಟ ಅನುಮತಿ ಇಲ್ಲದೇ ಸಮೀಕ್ಷೆಯ ವರದಿಯನ್ನು ಆಧರಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ವಿವಾದಿತ ಸ್ಥಳದಲ್ಲಿ ಯಾವುದೇ ಭೌತಿಕ ಉತ್ಖನನ ನಡೆಸಬಾರದು ಎಂದು ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್, ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ತಿಳಿಸಿದೆ.
ಭೋಜ್ ಶಾಲಾ ಮತ್ತು ಕಮಲ್ ಮೌಲಾ ಮಸೀದಿ ಜಾಗದ ಮಾಲೀಕತ್ವದ ನಡುವೆ ಕಾನೂನು ಸಮರ ನಡೆಯುತ್ತಿರುವ ನಡುವೆಯೇ ಸುಪ್ರೀಂಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.