Advertisement

ಕಾಶ್ಮೀರಿ ಪಂಡಿತರ ಹತ್ಯೆ: ಸುಪ್ರೀಂನಿಂದ ಅರ್ಜಿ ವಜಾ

07:50 AM Jul 25, 2017 | Team Udayavani |

ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ 1989- 90ರ ಅವಧಿಯಲ್ಲಿ ನಡೆದ 700 ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ಹಾಗೂ ಹತ್ಯೆ ಆರೋಪ ಎದುರಿಸುತ್ತಿರುವ ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲಿಕ್‌ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

Advertisement

ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಜೆ.ಎಸ್‌. ಖೆಹರ್‌ ಹಾಗೂ ನ್ಯಾ. ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ, ಪ್ರಕರಣ ನಡೆದು ಈಗಾಗಲೇ 27 ವರ್ಷಗಳು ಕಳೆದಿವೆ. ಈಗ ಹತ್ಯೆ, ಅಗ್ನಿಸ್ಪರ್ಶ, ಲೂಟಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಎಲ್ಲಿಂದ ತರುತ್ತೀರಾ ಎಂದು ಪ್ರಶ್ನಿಸಿತು. ಅಲ್ಲದೆ, ‘ಕಳೆದ 27 ವರ್ಷಗಳಿಂದ ನೀವೇಕೆ ಕೋರ್ಟ್‌ಗೆ ಬರಲಿಲ್ಲ? ಇಷ್ಟು ವರ್ಷಗಳ ನಂತರ ನೀವು ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸುತ್ತೀರಿ ಎಂಬುದನ್ನು ತಿಳಿಸಿ,’ ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದರು. ಪಂಡಿತರ ಹತ್ಯೆ ಸಂಬಂಧ 215 ಎಫ್ಐಆರ್‌ ದಾಖಲಾಗಿದ್ದರೂ ಈವರೆಗೆ ನ್ಯಾಯ ದೊರೆತಿಲ್ಲ ಎಂಬುದು ಅರ್ಜಿದಾರ ಎನ್‌ಜಿಒ ವಾದವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next