Advertisement

ಹೈವೇ ಮದ್ಯದಂಗಡಿ ನಿಷೇಧ ತೀರ್ಪು ಮಾರ್ಪಾಡು: 220 ಮಿ.ಗೆ ಸೀಮಿತ

05:54 PM Mar 31, 2017 | udayavani editorial |

ಹೊಸದಿಲ್ಲಿ : 20,000 ಜನಸಂಖ್ಯೆ ಇರುವ ಪ್ರದೇಶದಲ್ಲಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ನಿಷೇಧಿಸುವ ತನ್ನ ಈ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ತಿದ್ದುಪಡಿ ಮಾಡಿದ್ದು 500 ಮೀಟರ್‌ ವ್ಯಾಪ್ತಿಯ ನಿಷೇಧ  ಪ್ರದೇಶವನ್ನು 220 ಮೀಟರ್‌ಗೆ ಇಳಿಸಿದೆ. 

Advertisement

500 ಮೀಟರ್‌ ವ್ಯಾಪ್ತಿ ಪ್ರದೇಶದ ಹೈವೇಯಲ್ಲಿ  ಮದ್ಯದಂಗಡಿಗಳು ಇರಕೂಡದೆಂದು 2016ರ ಡಿಸೆಂಬರ್‌ 15ರಂದು ಹೊರಡಿಸಲಾಗಿದ್ದ  ಆದೇಶವು, ಇಂದಿನ ಆದೇಶದಲ್ಲಿ  ನಮೂದಿಸಲಾಗಿರುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುತ್ತದೆ ಎಂದು  ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ನೇತೃತ್ವದ ಪೀಠವು ಸ್ಪಷ್ಟಪಡಿಸಿದೆ. 

ಕುಡಿದು ವಾಹನ ಚಾಲನೆ ಮಾಡುವ ಕಾರಣಕ್ಕೆ ಸಂಭವಿಸುವ ಅಪಘಾತಗಳು ಹೆಚ್ಚುತ್ತಿರುವುದನ್ನು ಗಮನಿಸಿ ಈ ತೀರ್ಪು ನೀಡಲಾಗಿದೆ ಎಂದು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಮತ್ತು ಜಸ್ಟಿಸ್‌ ಎಲ್‌ ಎನ್‌ ರಾವ್‌ ಅವರನ್ನೂ ಒಳಗೊಂಡ ಪೀಠವು ಹೇಳಿದೆ.

ಡಿಸೆಂಬರ್‌ 15ಕ್ಕೆ ಮುನ್ನ ಮದ್ಯಮಾರಾಟ ಅಂಗಡಿಗಳಿಗೆ ನೀಡಲಾಗಿದ್ದ ಲೈಸನ್ಸ್‌ ಈ ವರ್ಷ ಸೆಪ್ಟಂಬರ್‌ 30ರ ತನಕ ಜಾರಿಯಲ್ಲಿರುತ್ತದೆ ಎಂದು ಆದೇಶವು ಹೇಳಿದೆ.

ಇತರ ಮದ್ಯದಂಗಡಿಗಳು ಡಿ.15ರ ತೀರ್ಪಿನ ಪ್ರಕಾರ ನಾಳೆ ಎಪ್ರಿಲ್‌ 1ರಿಂದ ಮುಚ್ಚಲ್ಪಡುತ್ತವೆ. 

Advertisement

ಹೆದ್ದಾರಿಯಲ್ಲಿ  ಮದ್ಯದಂಗಡಿಗಳು 220 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ಇರಕೂಡದೆಂಬ ನಿಯಮವು ಬೆಟ್ಟ ಪ್ರದೇಶದ ರಾಜ್ಯಗಳಾಗಿರುವ ಸಿಕ್ಕಿಂ, ಮೇಘಾಲಯ ಮತ್ತು ಹಿಮಾಚಲ ಪ್ರದೇಶಕ್ಕೂ ಅನ್ವಯವಾಗಲಿದೆ. 

ಹೆದ್ದಾರಿಗಳಲ್ಲಿ  500 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ  ಮದ್ಯದಂಗಡಿ ಇರಕೂಡದೆಂಬ ಆದೇಶವನ್ನು ಪುನರ್‌ ಪರಿಶೀಲಿಸಬೇಕೆಂದ ಮನವಿಗಳು ಅಪಾರ ಸಂಖ್ಯೆಯಲ್ಲಿ ಬಂದುದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಮಾರ್ಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next