Advertisement

ಮಹಿಳೆಯರಿಗೆ ಮಸೀದಿ ಪ್ರವೇಶಾವಕಾಶ: ಸುಪ್ರೀಂ –ವಿಚಾರಣೆ, ಕೇಂದ್ರಕ್ಕೆ ನೊಟೀಸ್‌

09:48 AM Apr 17, 2019 | Sathish malya |

ಹೊಸದಿಲ್ಲಿ : ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ಕೈಗೊಳ್ಳಲು ಮಸೀದಿ ಪ್ರವೇಶಾವಕಾಶಕ್ಕೆ ಅನುಮತಿ ನೀಡಬೇಕೆಂಬ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿದೆ.

Advertisement

ಪುಣೆ ಮುಸ್ಲಿಂ ದಂಪತಿ ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ನಡೆಸಲು ಮಸೀದಿ ಪ್ರವೇಶಾವಕಾಶಕ್ಕೆ ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿತ್ತು.

ಜಸ್ಟಿಸ್‌ ಎಸ್‌ ಎ ಬೋಬಡೆ ನೇತೃತ್ವದ ಪೀಠವು ಈ ಮನವಿಯ ವಿಚಾರಣೆಗೆ ಒಪ್ಪಿತಲ್ಲದೆ ಈ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿತು.

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿರುವ ಹಿನ್ಮೆಲೆಯಲ್ಲಿ ತಾನು ಈ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಪೀಠವು ಅರ್ಜಿದಾರರ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದ ವಕೀಲರಿಗೆ ತಿಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next