Advertisement

Assam NRC ಆಕ್ಷೇಪ, ಕ್ಲೇಮು ಸ್ವೀಕಾರ ದಿನ ಮುಂದಕ್ಕೆ ಹಾಕಿದ ಸುಪ್ರೀಂ

03:34 PM Sep 05, 2018 | Team Udayavani |

ಹೊಸದಿಲ್ಲಿ : ಅಸ್ಸಾಂ ಎನ್‌ಆರ್‌ಸಿ (ಪೌರರ ರಾಷ್ಟ್ರೀಯ ರಿಜಿಸ್ಟ್ರಿ) ಆಕ್ಷೇಪ, ಕ್ಲೇಮುಗಳನ್ನು ಸ್ವೀಕರಿಸುವ ದಿನಾಂಕವನ್ನು ಮುಂದಕ್ಕೆ ಹಾಕಿದೆ. 

Advertisement

ಎನ್‌ಆರ್‌ಸಿ ಸಂಚಾಲಕ  ಪ್ರತೀಕ್‌ ಹಜೇಲಾ ಅವರ ವರದಿಗೆ ಪ್ರತಿಯಾಗಿ ಉತ್ತರ ಸಲ್ಲಿಸುವಂತೆ ಕೇಂದ್ರ ಮತ್ತು ಇತರ ಹಿತಾಸಕ್ತಿದಾರರನ್ನು ಪ್ರತಿನಿಧಿಸುತ್ತಿರುವ  ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರನ್ನು ಸುಪ್ರೀಂ ಕೋರ್ಟ್‌ ಪೀಠವು ಕೇಳಿಕೊಂಡಿದ್ದು ಈ ಕುರಿತ ಮುಂದಿನ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ. 

ಜಸ್ಟಿಸ್‌ಗಳಾದ ರಂಜನ್‌ ಗೊಗೋಯ್‌ ಮತ್ತು ಆರ್‌ ಎಫ್ ನಾರಿಮನ್‌ ಅವರನ್ನು ಒಳಗೊಂಡ ಪೀಠವು, ಹಜೇಲಾ ಅವರ ವರದಿಯನ್ನು ಅವಲೋಕಿಸಿತು. ಈ ವರದಿಯಲ್ಲಿ ಹಜೇಲಾ ಅವರು ರಾಜ್ಯದ ಪೌರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸುವ ಕ್ಲೇಮಿಗೆ “ಎ’ ಪಟ್ಟಿಯಲ್ಲಿ ಸೂಚಿಸಲಾಗಿರುವ 15 ದಾಖಲೆ ಪತ್ರಗಳ ಪೈಕಿ ಹತ್ತನ್ನು ಅವಲಂಬಿಸಿದರೆ ಸಾಕೆಂದು ಹೇಳಿದ್ದಾರೆ. 

ಅಸ್ಸಾಂ ಕರಡು ಎನ್‌ಆರ್‌ಸಿ ಗೆ ಈಚೆಗೆ ಸೇರಿಸಲ್ಪಟ್ಟಿರುವವವ ಪೈಕಿ ಶೇ.10ರಷ್ಟು ಮಂದಿಯ ಸೇರ್ಪಡೆಯನ್ನು ಪುನರ್‌ ಪರಿಶೀಲಿಸಬಹುದಾಗಿದೆ ಎಂದು ಕಳೆದ ಆ.28ರಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ಕೆಲಸವನ್ನು ಸ್ವತಂತ್ರ ತಂಡವೊಂದು ಮಾಡಬಹುದಾಗಿದೆ ಎಂದೂ ಅದು ಹೇಳಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next