Advertisement

ಚುನಾವಣಾ ಆಯುಕ್ತ ಗೋಯೆಲ್ ನೇಮಕ: ಕೇಂದ್ರಕ್ಕೆ ಕಡತಗಳನ್ನು ತೋರಿಸಲು ಹೇಳಿದ ಸುಪ್ರೀಂ !

09:30 PM Nov 23, 2022 | Team Udayavani |

ನವದೆಹಲಿ: ನವೆಂಬರ್ 19 ರಂದು ಅರುಣ್ ಗೋಯೆಲ್ ಅವರನ್ನು ಆಯೋಗಕ್ಕೆ ನೇಮಕ ಮಾಡಿರುವ ಕುರಿತು, ಭಾರತದ ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯ ಕುರಿತು ಕೆಲವು ತೀಕ್ಷ್ಣವಾದ ಪ್ರತಿಕ್ರಿಯೆಗಳು ಮತ್ತು ಪ್ರಶ್ನೆಗಳ ಜೊತೆಗೆ, ಸುಪ್ರೀಂ ಕೋರ್ಟ್ ಈಗ ಸರಕಾರದ ಬಳಿ ನಿರ್ದಿಷ್ಟ ಫೈಲ್‌ಗಳನ್ನು ಕೇಳಿದೆ. ಗುರುವಾರವೂ ವಿಚಾರಣೆ ಮುಂದುವರಿಯಲಿದೆ.

Advertisement

ನ್ಯಾಯಮೂರ್ತಿ ಕೆ. ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೇಮಕಾತಿಯಲ್ಲಿ ಯಾವುದೇ ಗೊಂದಲ ಇದೆಯೇ ಎಂದು ತಿಳಿಯಲು ಬಯಸಿದೆ.

ಸಿಇಸಿ ಮತ್ತು ಇಸಿಗಳ ಆಯ್ಕೆ ಕಾರ್ಯವಿಧಾನದ ಕುರಿತು ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಯ ಫಲಿತಾಂಶಕ್ಕಾಗಿ ನೇಮಕಾತಿ ನಡೆಯುತ್ತಿದ್ದರೆ ಅದು ಹೆಚ್ಚು ಸೂಕ್ತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ನಾವು ಈ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ ನಂತರ ಈ ನೇಮಕಾತಿಯನ್ನು ಮಾಡಲಾಗಿರುವುದರಿಂದ, ನೇಮಕಾತಿಯನ್ನು ಹೇಗೆ ಮಾಡಲಾಗಿದೆ ಎಂದು ನೋಡೋಣ. ಎಲ್ಲವೂ ತೃಪ್ತಿಕರವಾಗಿವೆ ಎಂದು ನೀವು ಹೇಳುವುದರಿಂದ ನಿಮಗೆ ಯಾವುದೇ ಅಪಾಯವಾಗಬಾರದು, ”ಎಂದು ಪೀಠ ಉಲ್ಲೇಖಿಸಿದೆ.

ಇತ್ತೀಚೆಗಷ್ಟೇ ನಿವೃತ್ತರಾದ ಐಎಎಸ್ ಅಧಿಕಾರಿ ಗೋಯೆಲ್ ಅವರನ್ನು ರಾಜೀವ್ ಕುಮಾರ್ ಮತ್ತು ಅನುಪ್ ಚಂದ್ರ ಪಾಂಡೆ ಅವರೊಂದಿಗೆ ಮೂವರು ಸದಸ್ಯರ ಚುನಾವಣಾ ಆಯೋಗದ ಭಾಗವಾಗಿ ನೇಮಕ ಮಾಡಲಾಗಿದೆ. ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಕ್ರಿಯೆಯ ಮೇಲಿನ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಅರುಣ್ ಗೋಯೆಲ್ ಅವರ ನೇಮಕ ವಿಚಾರವನ್ನು ಪ್ರಸ್ತಾಪಿಸಿದರು.

Advertisement

ಅರುಣ್ ಗೋಯೆಲ್ ಅವರು ಗುರುವಾರದವರೆಗೆ, ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಶುಕ್ರವಾರ ಅವರಿಗೆ ವಿಆರ್ ಎಸ್ ನೀಡಲಾಯಿತು ಮತ್ತು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು,ಇಲ್ಲದಿದ್ದರೆ ಅವರು ಡಿಸೆಂಬರ್ 31 ರಂದು 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಿದ್ದರು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

‘ವೈಯಕ್ತಿಕ ನಿದರ್ಶನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ’ ಎಂದ ಸರಕಾರಿ ವಕೀಲರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.”ಯಾವ ಕಾರ್ಯವಿಧಾನ ಎಂಬುದನ್ನು ನಾವು ನೋಡಬಯಸುತ್ತೇವೆ. ನಾವು ಅದನ್ನು ಎದುರಾಳಿಯಾಗಿ ಪರಿಗಣಿಸುವುದಿಲ್ಲ. ನಮ್ಮ ದಾಖಲೆಗಾಗಿ ಇಡುವುದಿಲ್ಲ ನಿಮಗೆ ನಾಳೆಯವರೆಗೆ ಸಮಯವಿದೆ” ಎಂದು ನ್ಯಾಯಾಲಯವು ಹೇಳಿದೆ.

ಆಯೋಗದ ವೆಬ್‌ಸೈಟ್ ಪ್ರಕಾರ, ಅರುಣ್ ಗೋಯೆಲ್ ಅವರು ಈ ಸೋಮವಾರ, ನವೆಂಬರ್ 21 ರಂದು ಅಧಿಕಾರ ವಹಿಸಿಕೊಂಡಿದ್ದು, ಪಂಜಾಬ್ ಕೇಡರ್‌ನ 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಅವರು 37 ವರ್ಷಗಳ ಸೇವೆಯ ನಂತರ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು. ಫೆಬ್ರವರಿ 2025 ರಲ್ಲಿ ರಾಜೀವ್ ಕುಮಾರ್ ಅಧಿಕಾರ ಅವಧಿ ಮುಕ್ತಾಯವಾದ ನಂತರ ಅವರು ಮುಖ್ಯ ಚುನಾವಣಾ ಆಯುಕ್ತರಾಗಲು ಸಾಲಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next